MMYC ಬೆಂಗಳೂರು ವತಿಯಿಂದ ನಡೆದ ಕುರ್ ಆನ್ ಪಾರಾಯಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ
MMYC Bangalore ಇದರ ವತಿಯಿಂದ ಕಳೆದ ತಿಂಗಳು ನಡೆದ ಕುರ್ ಆನ್ ಪಾರಾಯಣ ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಪ್ರಸಂಶ ಪತ್ರ ವಿತರಣೆ ಕಾರ್ಯಕ್ರಮವು ಬೆಂಗಳೂರು ಬ್ಯಾರಿ ಭವನ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು MMYC Bangalore ಇದರ ಗೌರವಾಧ್ಯಕ್ಷರಾದ ಉಮ್ಮರ್ ಹಾಜಿ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ MMYC Bangalore ಇದರ ಸಂಸ್ಥಾಪಕ ಅಧ್ಯಕ್ಷರಾದ ಅಬೂಬಕ್ಕರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ MMYC ಸ್ಥಾಪನೆ ನಂತರ ಸಂಘಟನೆ ನೇತೃತ್ವದಲ್ಲಿ ವಿವಿಧ ಕಡೆ ಪ್ರಳಯ ಸಂಭವಿಸಿದಾಗ ಕಿಟ್ ವಿತರಣೆ, ಬೆಂಗಳೂರಿನಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತುರ್ತು ರಕ್ತದ ಅವಶ್ಯಕತೆ ಬಂದಾಗ ಪೂರೈಕೆ, ರೋಗಿಗಳನ್ನು ತುರ್ತು ಆಸ್ಪತ್ರೆಗೆ ಸಾಗಿಸುವಂತೆ ಸಂಸ್ಥೆ ಅಂಬುಲೆನ್ಸ್ ಗೆ ಕರೆ ಬಂದಾಗ ತಕ್ಷಣ ಸ್ಪಂದಿಸುವ ಹಾಗೂ ಸಂಕಷ್ಟದಲ್ಲಿರುವ ಜನರ ಪರ ಮಿಡಿಯುವ MMYC ಪದಾಧಿಕಾರಿಗಳು ಸದಸ್ಯ ಬಂಧುಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ವೇದಿಕೆಯಲ್ಲಿ ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಬೆಂಗಳೂರು ಪ್ರಮುಖರಾದ ಮಕ್ಸೂದ್ ಅಹ್ಮದ್, ಪ್ರಾಸ್ತಾವಿಕವಾಗಿ ಮಾತನಾಡಿ MMYC Bangalore ಆರಂಭಗೊಂಡಾಗ ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಇರುವಾಗ ಬೆಂಗಳೂರಿನಲ್ಲಿ ಇನ್ನು ಬೇರೆ ಬೇರೆ ಸಂಘಟನೆಗಳು ಯಾಕೆ ಎಂದು ನಮ್ಮ ಅಭಿಪ್ರಾಯಗಳನ್ನು ಆಲೋಚನೆಗಳನ್ನು ಮೀರಿಸುವ ಕೆಲಸ ಕಾರ್ಯಗಳನ್ನು ಯಾವುದೇ ಪ್ರಚಾರ ಇಲ್ಲದೆ ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿನ ಮುಸ್ಲಿಮರ ತಂಡ MMYC ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಸಂಘಟನೆಯ ಕಾರ್ಯಕ್ರಮವನ್ನು ಶ್ಲಾಘಿಸಿದರು.
ನಿವೃತ್ತ ಅಧಿಕಾರಿ ಇಬ್ರಾಹಿಂ ಗೂನಡ್ಕ ಸುಳ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. BWA ಪ್ರಮುಖರಾದ ಚೆಯ್ಯಬ್ಬ ಬ್ಯಾರಿ, ಯೂಸೂಫ್ ಪೆರ್ಪೊಡಿ, ಅಶ್ರಫ್ ಬ್ಯಾರಿ, MMYC ಗೌರವ ಸಲಹೆಗಾರ ಅಬ್ದುಲ್ ರಝಾಕ್, ಉಪಾಧ್ಯಕ್ಷರಾದ, ವಾಹಿದ್ ಖಾನ್, ಪ್ರಮುಖರಾದ ರಹ್ಮಾನ್ ಎಕ್ಸ್ಪರ್ಟ್ ಬಶೀರ್ ಪುಣಚ, ಸಮದ್ ಸೊಂಪಾಡಿ, ನಿರ್ದೇಶಕರಾದ ಉಮ್ಮರ್ ಕುಂಞಿ ಸಾಲೆತ್ತೂರು, ಹಬೀಬ್ ನಾಳ, ಅಬ್ಬಾಸ್ ಸಿಪಿ, ರಫೀಕ್ ಟಿಓಟಿ ಮೆಜೆಸ್ಟಿಕ್, ಲತೀಫ್ ಬಿ.ಕೆ, ಅಶ್ರಫ್ ತಾಹ ಇರ್ಫಾನ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಶಸ್ತಿ ವಿತರಿಸಿದರು.
ಉಸ್ತಾದ್ ಹಾಫಿಝ್ ರಶೀದ್ ಅವರು ಕಿರಾಅತ್ ಪಠಿಸಿದರು. MMYC ಪ್ರಮುಖರಾದ ಜುನೈದ್ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು. ಲತೀಫ್ ವಂದಿಸಿದರು.
ಪ್ರಶಸ್ತಿ ವಿಜೇತ ಮಕ್ಕಳ ವಿವರ ಈ ಕೆಳಗಿನಂತಿದೆ
Boys senior
ಮೊಹಮ್ಮದ್ ಸುಹೈಲ್.
ನೂರಲ್ ಹಿದಾಯ ಸುನ್ನಿ ಮದ್ರಸ HSR layout Bangalore
Girls’ senior
ಫಾತಿಮಾ ಹನ್ನತ್
Munavvirul Islam madrasa arekere banglore
Boys junior
ಝೈನುಲ್ ಆಬಿದೀನ್
Al madarsatul badriya banglore
Girls’ junior
ಮರಿಯಮ್ ಎಸಿ
Da e wathul Islam madarsa veveik nagar bangalore
ಸಹಿತ ಹಲವರು ವಿವಿಧ ವಿಭಾಗಗಳಲ್ಲಿ ದ್ವಿತೀಯ ತೃತೀಯ
ಪ್ರಶಸ್ತಿ ಸ್ವೀಕರಿಸಿದರು.