ಕೇರಳ: ಆಟೋ ಚಾಲಕನಿಗೆ 25 ಕೋ.ರೂ ಲಾಟರಿ ಬಹುಮಾನ!
15.72 ಕೋ. ರೂ ಮಾತ್ರ ಸ್ವೀಕರಿಸಲಿರುವ ಅನೂಪ್!
ಕೇರಳ: ಈ ಬಾರಿಯ ಓಣಂ ಬಂಪರ್ ಲಾಟರಿ ಗೆದ್ದಿರುವ ಅನೂಪ್ ಗೆ ಇದು ‘ಕನಸು ನನಸಾಗಿದ್ದೇ’ ಎನ್ನಬಹುದು. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಅನೂಪ್ ಅವರು ಶನಿವಾರ ರಾತ್ರಿ ಭಗವತಿ ಏಜೆನ್ಸಿಯಿಂದ ಅದೃಷ್ಟದ ಟಿಕೆಟ್ ಖರೀದಿಸಿದ್ದರು. ಈ ವರ್ಷದ ಓಣಂ ಬಂಪರ್ ಅತ್ಯಧಿಕ ಬಹುಮಾನದ ಮೊತ್ತ 25 ಕೋಟಿ ರೂ. ಅನೂಪ್ ಪಾಲಾಗಿದೆ.

ಭಾನುವಾರ ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ಸಾರಿಗೆ ಸಚಿವ ಆಂಟನಿ ರಾಜು ಮತ್ತು ವಟ್ಟಿಯೂರ್ಕಾವು ಶಾಸಕ ವಿ.ಕೆ.ಪ್ರಶಾಂತ್ ಅವರ ಸಮ್ಮುಖದಲ್ಲಿ ಲಕ್ಕಿ ಡ್ರಾ ಮಾಡಿದ್ದರು.
ಈ ವರ್ಷದ ಓಣಂ ಬಂಪರ್ ಬೆಲೆಯು ಕೇರಳ ಲಾಟರಿ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಯ ಹಣವಾಗಿದೆ.
ಲಾಟರಿ ವಿಜೇತರ ಒಟ್ಟು ಮೊತ್ತ (ಪ್ರಥಮ ಬಹುಮಾನ) 25 ಕೋಟಿ ರೂ. ದ್ವಿತೀಯ ಬಹುಮಾನಕ್ಕೆ 5 ಕೋಟಿ ರೂ., ತೃತೀಯ ಬಹುಮಾನವಾಗಿ 10 ಮಂದಿಗೆ ತಲಾ 1 ಕೋಟಿ ರೂ. ಆಗಿತ್ತು.
ಟಿಕೆಟ್ ಸಂಖ್ಯೆ TJ-750605 ಪ್ರಥಮ ಬಹುಮಾನವನ್ನು ಗೆದ್ದುಕೊಂಡಿತು ಮತ್ತು ಅದೃಷ್ಟಶಾಲಿ ವಿಜೇತರು ಯಾರು ಎಂದು ತಿಳಿಯಲು ಎಲ್ಲರೂ ಕಾತುರರಾಗಿದ್ದರು. ನಂತರ ಅನೂಪ್ ನಾನೇ ಅದೃಷ್ಟಶಾಲಿ ಎಂದು ಹೇಳಿಕೊಂಡಿದ್ದಾನೆ.
ಎಲ್ಲಾ ತೆರಿಗೆ ಕಡಿತಗಳ ನಂತರ, ಅನೂಪ್ 15 ಕೋಟಿ 75 ಲಕ್ಷ ರೂಪಾಯಿಗಳನ್ನು ಸ್ವೀಕರಿಸುತ್ತಾರೆ.
ಪ್ರತಿ ಲಾಟರಿ ಟಿಕೆಟ್‌ನ ಬೆಲೆ 500 ಮತ್ತು 67 ಲಕ್ಷ ರೂಪಾಯಿಗಳ ಓಣಂ ಬಂಪರ್ ಟಿಕೆಟ್‌ಗಳನ್ನು ಈ ವರ್ಷ ಮುದ್ರಿಸಲಾಗಿದೆ.