ಕ್ಷೇತ್ರದ ಜನತೆ ನನ್ನನ್ನೇ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿ: ಬೊಮ್ಮಾಯಿ
ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಜನತೆ ನನ್ನನ್ನೇ ಅಭ್ಯರ್ಥಿ ಎಂದು ಭಾವಿಸಿ ನನ್ನ ಪುತ್ರ ಭರತ್ ಬೊಮ್ಮಾಯಿಗೆ ಮತ ನೀಡಬೇಕೆಂದು ಹಾವೇರಿ-ಗದಗ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದರು.
ಬೊಮ್ಮಾಯಿಯವರು ಹೊಸೂರು, ದುಂಡಸಿ, ಜಕನಕಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ತಮ್ಮ ಪುತ್ರ ಭರತ್ ಪರ ಪ್ರಚಾರ ನಡೆಸಿದರು.
ಕಳೆದ 15 ವರ್ಷದಲ್ಲಿ ಈ ತಾಲೂಕಿನ ಅಭಿವೃದ್ಧಿಯ ಚಿತ್ರಣ ಹೇಗೆ ಬದಲಾಗಿದೆ ಎನ್ನುವುದನ್ನು ತಾವೆಲ್ಲ ನೊಡಿದ್ದೀರಿ. ಅಭಿವೃದ್ಧಿ ನಿಂತ ನೀರಲ್ಲ ಅದು ನಿರಂತರವಾಗಿ ಮುಂದುವರೆಯಬೇಕು. ಹೀಗಾಗಿ ನಾವು ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.
ನಾನು ಈ ಬಾರಿ ಚುನಾವಣೆಯಲ್ಲಿ ನನ್ನ ಮಗನನ್ನು ನಿಲ್ಲಿಸಬಾರದು ಎಂದು ತೀರ್ಮಾನಿಸಿದ್ದೆ. ಹೈಕಮಾಂಡ್ ನೀವು ಇರಲೇಬೇಕು. ನಿಮ್ಮ ಮಗನಿಗೆ ಟಿಕೆಟ್ ಕೊಡುತ್ತೇವೆ. ನೀವು ಅಲ್ಲಿ ಕೆಲಸ ಮಾಡಿ ಎಂದು ಹೇಳಿದ್ದಾರೆ. ನಾನು ಈ ತಾಲೂಕನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ. ನಿಮ್ಮ ಪ್ರೀತಿಗೆ ಎಂದೂ ಬೆಲೆ ಕಟ್ಟಲಾಗುವುದಿಲ್ಲ. ಈ ಕ್ಷೇತ್ರದ ಅಭಿವೃದ್ಧಿ ಇನ್ನೂ ಆಗಬೇಕಿದೆ. ಭರತ್ ಬೊಮ್ಮಾಯಿ ಅಭಿವೃದ್ದಿ ಕಾರ್ಯ ಮುಂದುವರೆಸುತ್ತಾನೆ. ಭರತ್ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.