ಪುತ್ತೂರಿನಲ್ಲಿ ಬಿಜೆಪಿ ವಿಜಯೋತ್ಸವ
ಪುತ್ತೂರು: ವಿಧಾನಪರಿಷತ್ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಿಶೋರ್ ಕುಮಾರ್ ಬೊಟ್ಯಾಡಿ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಅ.26ರಂದು ಪುತ್ತೂರಿನಲ್ಲಿ ನಡೆಯಿತು. ಅದಕ್ಕೂ ಮೊದಲು ವಿಜಯೋತ್ಸವ ಮೆರವಣಿಗೆ ನಡೆಯಿತು.
ದರ್ಬೆ ವೃತ್ತದಿಂದ ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ, ನಮಸ್ಕರಿಸುತ್ತಾ ಸಾಗಿದ ಕಿಶೋರ್ ಕುಮಾರ್ ಅವರು ಪುತ್ತೂರು ಮುಖ್ಯ ರಸ್ತೆಯಿಂದ ಸಾಗಿ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದರು. ಹಲವಾರು ಮಂದಿ ಕಿಶೋರ್ ಕುಮಾರ್ ಅವರಿಗೆ ಹರಾರ್ಪಣೆ ಮಾಡಿ ಗೌರವಿಸಿದರು.