ಜ.27: ಕುಂಬ್ರ ಮರ್ಕಝುಲ್ ಹುದಾದಲ್ಲಿ ‘ಅಲ್ ಮಾಹಿರಾ’ ಪದವಿ ಪ್ರದಾನ ಸಮ್ಮೇಳನ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಶರೀಅತ್ ಪದವಿ ಶಿಕ್ಷಣ ಪೂರ್ತಿಗೊಳಿಸಿದ ವಿದ್ಯಾರ್ಥಿನಿಯರಿಗೆ ‘ಅಲ್ ಮಾಹಿರಾ’ ಪದವಿ ಪ್ರದಾನ ಸಮಾರಂಭ 2024 ಜ.27ರಂದು ಬೆಳಗ್ಗೆ ಕುಂಬ್ರ ಮರ್ಕಝ್ ಆವರಣದಲ್ಲಿ ನಡೆಯಲಿದೆ.
ಮಹಿಳೆಯರಿಗಾಗಿ ಮಾತ್ರ ಸಂಘಟಿಸುವ ಈ ಘಟಿಕೋತ್ಸವ ಸಮಾರಂಭದಲ್ಲಿ 162 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. 2012ರಲ್ಲಿ ಪ್ರಾರಂಭವಾದ ಶರಿಅತ್ ಪದವಿ ಕಾಲೇಜಿನಲ್ಲಿ ಈಗಾಗಲೇ 9 ಬ್ಯಾಚ್‌ಗಳ ವಿದ್ಯಾರ್ಥಿನಿಯರು ಪದವೀಧರರಾಗಿ ಹೊರಬಂದಿದ್ದು ಇವರಲ್ಲಿ ಬಹುತೇಕರು ವಿವಿಧ ಮಹಿಳಾ ಶಿಕ್ಷಣ ಕೇಂದ್ರಗಳಲ್ಲಿ ಬೋಧಕಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಂಬ್ರ ಮರ್ಕಝ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಯಿತು.
ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿದರು. ಸಭೆಯಲ್ಲಿ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಕಾರ್ಯದರ್ಶಿ ರಶೀದ್ ಬಿ.ಕೆ, ಆಡಿಟರ್ ಅನ್ವರ್ ಹುಸೇನ್ ಗೂಡಿನಬಳಿ, ಸದಸ್ಯರಾದ ಆಶಿಕುದ್ದೀನ್ ಅಖ್ತರ್, ಯೂಸುಫ್ ಹಾಜಿ ಕೈಕಾರ, ಹಮೀದ್ ಸುಳ್ಯ, ಕರೀಂ ಕಾವೇರಿ ಉಪಸ್ಥಿತರಿದ್ದರು ವಿವಿಧ ವಿಚಾರಗಳ ಚರ್ಚೆಯಲ್ಲಿ ಭಾಗವಹಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಶೀರ್ ಇಂದ್ರಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ ವಂದಿಸಿದರು.