ವಿಧಾನಪರಿಷತ್ ಉಪಚುನಾವಣೆ: ಎಸ್‌ಡಿಪಿಐಯಿಂದ ಅನ್ವರ್ ಸಾದತ್ ಬಜತ್ತೂರು ಸ್ಪರ್ಧೆ
ಪುತ್ತೂರು: ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು ಸೆ.3ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಪಕ್ಷಗಳು ಕೋಮುವಾದ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದ್ದು ಪರ್ಯಾಯವಾಗಿ ಎಸ್ ಡಿ ಪಿ ಐ ಸ್ಪರ್ಧೆ ನಡೆಸಲಿದೆ. ಸಾಮಾಜಿಕ, ಜನಪರ ಕಳಕಳಿಯುಳ್ಳ ಹೋರಾಟಗಾರ ಅನ್ವರ್ ಸಾದಾತ್ ಬಜತ್ತೂರು ಸ್ಪರ್ಧಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.