ಪುತ್ತೂರು: ಬಡಗನ್ನೂರಿನಲ್ಲಿ ವ್ಯಕ್ತಿಯಿಂದ ಮಹಿಳೆಯರಿಬ್ಬರ ಮೇಲೆ ಹಲ್ಲೆ
ಪುತ್ತೂರು: ಮಹಿಳೆಯರಿಬ್ಬರ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಎಂಬಲ್ಲಿ ನಡೆದಿದೆ. ಬಡಗನ್ನೂರು ನಿವಾಸಿ ಸುಲೇಖ ಮತ್ತು ಅವರ ಮನೆಗೆ ಕೆಲಸಕ್ಕೆ ಬಂದ ಗಿರಿಜಾ ಹಲ್ಲೆಗೊಳಗಾದವರು. ಸುರೇಶ್ ಎಂಬಾತ ಹಲ್ಲೆ ಮಾಡಿದ ಆರೋಪಿ.

ಹಲ್ಲೆಯಿಂದ ಅಸ್ವಸ್ಥಗೊಂಡ ಮಹಿಳೆಯರಿಬ್ಬರನ್ನು ಪುತ್ತೂರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆಯರಿಬ್ಬರು ಗುಡ್ಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸುಲೇಖ ಅವರ ದೂರದ ಸಂಬಂಧಿ ಸುರೇಶ್ ನಾಯ್ಕ ಬಂದು ಸುಲೇಖ ಅವರ ಕುತ್ತಿಗೆ ಬಟ್ಟೆ ಸುತ್ತಿ ಕೊಲೆಗೆ ಯತ್ನಿಸಿದ್ದಾರೆನ್ನಲಾಗಿದೆ. ಇದನ್ನು ನೋಡಿದ ಗಿರಿಜಾ ಅವರಿಗೂ ಆತ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಗಾಯಾಳುಗಳಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ತಿ ವಿಚಾರವಾಗಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗುತ್ತಿದೆಯಾದರೂ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪೋಲಿಸ್ ತನಿಖೆಯ ಬಳಿಕ ಸತ್ಯಾಂಶ ಹೊರ ಬರಲಿದೆ.