ಎಡಿಜಿಪಿ ಚಂದ್ರಶೇಖರ್ ಅವರ ಹೇಳಿಕೆಯನ್ನು ‘ನನಗೇ ಹೇಳಿರುವುದು ಎಂದು ಕುಮಾರಸ್ವಾಮಿ ಯಾಕೆ ಭಾವಿಸಬೇಕು?- ಜಿ ಪರಮೇಶ್ವರ್
ಬೆಂಗಳೂರು: ಎಡಿಜಿಪಿ ಚಂದ್ರಶೇಖರ್ ಅವರು ಬಳಸಿದ ಹಂದಿ ಪದ ಸದ್ಯ ಭಾರೀ ಚರ್ಚೆಯಾಗುತ್ತಿದೆ.

ಎಡಿಜಿಪಿ ಚಂದ್ರಶೇಖರ್ ಅವರು ಬರ್ನಾರ್ಡ್ ಷಾ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಅವರು ಅದನ್ನು ಕುಮಾರಸ್ವಾಮಿಯವರನ್ನು ಉದ್ದೇಶಿಸಿ ಹೇಳಿಲ್ಲ. ನನಗೇ ಹೇಳಿರುವುದು ಎಂದು ಕುಮಾರಸ್ವಾಮಿ ಯಾಕೆ ಭಾವಿಸಬೇಕು?’ ಎಂದು ಗೃಹ ಸಚಿವ ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಮತ್ತು ಎಡಿಜಿಪಿ ಚಂದ್ರಶೇಖರ್ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಚಂದ್ರಶೇಖರ್ ನೇತೃತ್ವದ ಎಸ್ಐಟಿಯನ್ನು ಕಾನೂನು ಪ್ರಕಾರವೇ ರಚಿಸಲಾಗಿದೆ. ಅವರು ಅವರ ಕೆಲಸ ಮಾಡುತ್ತಾರೆ. ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದರು.