ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ
ಸುಳ್ಯ: ಜೆ.ಡಿ.ಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೆ.23ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದಂಪತಿ ಸಮೇತ ಭೇಟಿ ನೀಡಿದ ಅವರು ದೇವರ ದರ್ಶನ ಪಡೆದು ತೆರಳಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ ಜಾಕೆ , ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಒಕ್ಕಲಿಗ ಗೌಡ ಮುಖಂಡರುಗಳಾದ ಸಂತೋಷ್ ಜಾಕೆ , ಗೋಪಾಲ ಎಣ್ಣೆ ಮಜಲ್, ಶಿವರಾಮ ಏನೆಕಲ್, ಸುಬ್ರಹ್ಮಣ್ಯ ಗೌಡ, ಗ್ರಾಮ ಸಮಿತಿ ಅಧ್ಯಕ್ಷ ಡಾ. ಎ. ಎ. ತಿಲಕ್, ಕಾರ್ಯದರ್ಶಿ ವಿಶ್ವನಾಥ ನಡುತೋಟ, ಉಪಾಧ್ಯಕ್ಷ ನಾರಾಯಣ ಅಗ್ರಹಾರ, ಪೂರ್ವ ಅಧ್ಯಕ್ಷ ಲೊಕೇಶ ಬಿ.ಎನ್, ಜಯರಾಮ ಕಟ್ಟೆಮನೆ, ಮುಂತಾದವರು ಉಪಸ್ಥಿತರಿದ್ದರು.