ಕರಾವಳಿಜಿಲ್ಲೆ

ಪಂಜ: ಬೈಕ್ ಮೇಲೆ ಜಿಗಿದ ಕಡವೆ:  ಬೈಕ್ ಸವಾರನಿಗೆ ತೀವ್ರ ಗಾಯ

ಸುಳ್ಯ: ಕಡವೆ ಬೈಕ್ ಮೇಲೆ ಜಿಗಿದು ಬೈಕ್ ಸವಾರ ಗಾಯ ಗೊಂಡ ಘಟನೆ ಸೆ.29 ರಾತ್ರಿ ಕೂತ್ಕುಂಜ ಗ್ರಾಮದ ಜಳಕದಹೊಳೆ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕೂತ್ಕುಂಜ ಗ್ರಾಮದ ಬೇರ್ಯ ತಿರುಮಲೇಶ್ವರ ಎಂಬವರು ಮನೆಯಿಂದ ಪಂಜ ಕಡೆ ಹೋಗುತ್ತಿದ್ದಾಗ ಗುತ್ತಿಗಾರು -ಪಂಜ ರಸ್ತೆಯ ಜಳಕದಹೊಳೆ ಎಂಬಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ತಿರುಮಲೇಶ್ವರ ಅವರಿಗೆ ತೀವ್ರ ಗಾಯವಾಗಿದ್ದು ಅವರನ್ನು ಕಡಬದ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!