ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲಕ್ಕೆ ಪದಾಧಿಕಾರಿಗಳ ನಿಯುಕ್ತಿ
ಪುತ್ತೂರು: ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲಕ್ಕೆ ಪದಾಧಿಕಾರಿಗಳನ್ನು ಮಹಿಳಾ ಮೋರ್ಚಾ ನಗರ ಮಂಡಲದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ರವರು ನಿಯುಕ್ತಿಗೊಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಪೂರ್ಣಿಮಾ ಬಲ್ನಾಡು, ಸುಪ್ರಭಾ ಕೇಶವ, ಮೋಹಿನಿ ವಿಶ್ವನಾ,ಥ ವಿಮಲಾ ಸುರೇಶ್ ಪಡ್ಡಾಯೂರು, ಕಾರ್ಯದರ್ಶಿಗಳಾಗಿ ವೀನಾಕ್ಷಿ ಪೂಜಾರಿ, ವನಿತಾ ಬಂಗೇರ, ಶೈಲಜಾ ಕೇಪುಳು, ಸರೋಜಿನಿ, ಕೋಶಾಧಿಕಾರಿಯಾಗಿ ಸುಮತಿ, ಸದಸ್ಯರಾಗಿ ವೀಣಾ ಆಚಾರ್ಯ, ಪ್ರೇಮ್ ಕಿಶೋರ್, ಸುಜಾತ, ರಾಜೀವಿ ಕುಬಲಾಜೆ, ಹರಿಣಾಕ್ಷಿ ತೆಂಕಿಲ, ಹೇಮಲತಾ ಬಡಾವು, ಮಮತಾ, ದಿವ್ಯ ಮನೋಹರ, ಚಂದ್ರಿಕಾ, ರಾಜೀವಿ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಪಿಬಿ ಕಲ್ಲಿಮಾರು , ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್ ಗೌರಿ , ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ , ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ನಗರ ಮಂಡಲ ಉಪಾಧ್ಯಕ್ಷ ಯುವರಾಜ್ ಕೆ ಪೆರಿಯಾತ್ತೊಡಿ, ಬಿಜೆಪಿ ಮಹಿಳಾ ಮೋರ್ಚಾ ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಲಕ್ಷ್ಮಿ ಶಗ್ರಿತ್ತಾಯ, ಸುನೀತಾ, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ವಿಮಲ ಸುರೇಶ್, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.