ಕ್ರೀಡೆ

IPL 2025: ಧೋನಿಯ ಸಂಭಾವನೆ ಕಡಿತ: ಅತೀ ಕಡಿಮೆ ಮೊತ್ತ ಪಡೆಯಲಿರುವ MSD



IPL 2025: ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ಐವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಈ ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ದಿಷ್ಟ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಹೀಗೆ ನಿಗದಿತ ಮೊತ್ತದೊಳಗೆ ಐವರು ಆಟಗಾರರ ಸಂಭಾವನೆ ನೀಡಬೇಕಾಗುತ್ತದೆ.

ಇಂಡಿಯನ್ ಪ್ರೀಮಿಯರ್ ಲೀಗ್ (2025) ಸೀಸನ್-18ರ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 5 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಈ ಐವರು ಆಟಗಾರರಲ್ಲಿ ಅತೀ ಕಡಿಮೆ ಹಣ ಪಡೆಯಲಿರುವುದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎನ್ನಲಾಗಿದೆ.

2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿರುವ ಧೋನಿ ಈ ಬಾರಿ ಅನ್ ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿಯೇ ಮಹೇಂದ್ರ ಸಿಂಗ್ ಧೋನಿಯ ರಿಟೈನ್ ಮೊತ್ತವು ಒಂದಂಕಿ ಕೋಟಿಗೆ ಸೀಮಿತವಾಗಲಿದೆ.

Leave a Reply

Your email address will not be published. Required fields are marked *

error: Content is protected !!