ಕರಾವಳಿ

ಫಾಳಿಲಾ- ಫಳೀಲಾ ವುಮೆನ್ಸ್ ಕಾಲೇಜುಗಳ ಇವನ್ ಸೆಮಿಸ್ಟರ್ ಪರೀಕ್ಷೆಯ ಮೌಲ್ಯ ಮಾಪನ ಆರಂಭ

ಪುತ್ತೂರು: ‘ಸಮಸ್ತ’ದ ಅಧೀನದ  ಫಾಳಿಲಾ-ಫಳೀಲಾ ವುಮೆನ್ಸ್ ಕಾಲೇಜುಗಳ ಇವನ್ ಸೆಮಿಸ್ಟರ್ ಪರೀಕ್ಷೆ  ಮುಕ್ತಾಯಗೊಂಡಿದ್ದು, ಇದರ ಮೌಲ್ಯಮಾಪನವು ವಿವಿಧ ಝೋನಲ್ ಕೇಂದ್ರಗಳಲ್ಲಿ ಎ.28ರಿಂದ ಆರಂಭಗೊಂಡಿದೆ.


ಕೇರಳ, ಕರ್ನಾಟಕದ ಸುಮಾರು 93 ಪರೀಕ್ಷಾ ಕೇಂದ್ರಗಳಲ್ಲಿ ನಾಲ್ಕು ಸಾವಿರದ ಐನೂರಷ್ಟು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಕರ್ನಾಟಕದಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು ಆರುನೂರು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಇದರ ಫಲಿತಾಂಶ ಮೇ ಹತ್ತರಂದು ಪ್ರಕಟಗೊಳ್ಳಲಿದೆ.


ಕರ್ನಾಟಕದಲ್ಲಿ ಸಾಲ್ಮರ ಮತ್ತು ಮಿತ್ತಬೈಲು ಈ ಎರಡು ಡಿವಿಷನ್ ಕೇಂದ್ರಗಳಲ್ಲಿ ಪರೀಕ್ಷಾ ಮೌಲ್ಯಮಾಪನ ಆರಂಭಗೊಂಡಿದ್ದು. ಕರ್ನಾಟಕದ ಫಾಳಿಲಾ-ಫಳೀಲಾ ಝೋನಲ್ ಕೇಂದ್ರವಾದ ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜಿನಲ್ಲಿ ಮೌಲ್ಯಮಾಪನ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಷ್  ಜೆ.ಪಿ‌.ಮುಹಮ್ಮದ್ ದಾರಿಮಿ ಕಾಸರಗೋಡು ಅವರು ಫಾಳಿಲಾ- ಫಳೀಲಾ ಪಠ್ಯಕ್ರಮದಲ್ಲಿ ಮಹಿಳೆಯರಿಗೆ ಧಾರ್ಮಿಕ – ಲೌಕಿಕ ಸಮನ್ವಯ ಶಿಕ್ಷಣವನ್ನು ನೀಡಲಾಗುತ್ತಿದ್ದು, ಈ ಶಿಕ್ಷಣ ವ್ಯವಸ್ಥೆಯು ಅತ್ಯಂತ ಜನಪ್ರಿಯವಾಗಿದೆ ಎಂದರು.


 ಫಾಳಿಲಾ-ಫಳೀಲಾ ಕರ್ನಾಟಕ ಝೋನಲ್ ಕಮಿಟಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ಪರ್ಲಡ್ಕ ಅವರು ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ  ಮುಂದುವರಿಯುತ್ತಿದ್ದು, ಎಸ್ .ಎಸ್. ಎಲ್. ಸಿ.ಉತ್ತೀರ್ಣರಾದ ವಿದ್ಯಾರ್ಥಿನಿಯರು ಪಿಯುಸಿ ಜೊತೆಗೆ ಫಾಳಿಲಾ ಮತ್ತು ಪಿಯುಸಿ ಉತ್ತೀರ್ಣರಾದವರು ಡಿಗ್ರಿ ಮತ್ತು ಫಳೀಲಾ ಕೋರ್ಸ್ ನ ದಾಖಲಾತಿ ಗಾಗಿ ಕರ್ನಾಟಕ ದಲ್ಲಿ ಕಾರ್ಯಾಚರಿಸುತ್ತಿರುವ ಫಾಳಿಲಾ- ಫಳೀಲಾ ಕಾಲೇಜುಗಳನ್ನ ಸಂಪರ್ಕಿಸ ಬೇಕೆಂದರು.


 ಸಮಾರಂಭದಲ್ಲಿ ಮುಫತ್ತಿಷ್ ಜಾಫರ್ ಫೈಝಿ ಮಲಪ್ಪುರಂ, ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್, ಸಂಚಾಲಕ ಮುಹಮ್ಮದ್ ಸಾಬ್ ಹಾಜಿ, ವಿವಿಧ ಕಾಲೇಜುಗಳ ಪ್ರತಿನಿಧಿಗಳಾದ ಅಬ್ದುರ್ರಹ್ಮಾನ್ ಫೈಝಿ ಕೆಮ್ಮಾರ, ಸಈದ್ ಫೈಝಿ ಕಲ್ಲುಗುಂಡಿ, ಸತ್ತಾರ್ ಅಸ್ನವೀ ಆತೂರು,ಹನೀಫ್ ಫೈಝಿ ಬೆಳ್ತಂಗಡಿ, ಬಶೀರ್ ದಾರಿಮಿ ಸಾಲ್ಮರ, ನೌಫಲ್ ಮಾಸ್ಟರ್ ಆತೂರು ಮೊದಲಾದವರು ಉಪಸ್ಥಿತರಿದ್ದರು. ಝೋನಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಕಾರ್ಯಕ್ರಮದ ಸ್ವಾಗತಿಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!