ಶೇಖ್ ಹಸೀನಾ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿದ ಮಧ್ಯಂತರ ಸರ್ಕಾರ
ಬಾಂಗ್ಲಾದೇಶದಲ್ಲಿ ನಡೆದ ದಂಗೆಯಿಂದಾಗಿ ದೇಶದಿಂದ ಪಲಾಯನ ಮಾಡಿದ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಮಧ್ಯಂತರ ಸರ್ಕಾರ ರದ್ದುಗೊಳಿಸಿದೆ.
ಶೇಖ್ ಹಸೀನಾ ಅವರ ಪಾಸ್‌ಪೋರ್ಟ್, ಮಾಜಿ ಸಚಿವರು ಮತ್ತು ಮಾಜಿ ಸಂಸದರು ಇನ್ನು ಮುಂದೆ ಅವರ ಹುದ್ದೆಯಲ್ಲಿಲ್ಲದವರ ಪಾಸ್‌ಪೋರ್ಟ್ ಅನ್ನು ಹಿಂಪಡೆಯಬೇಕಾಗಿದೆ ಎಂದು ಆಂತರಿಕ ಸಚಿವಾಲಯ ಪ ತಿಳಿಸಿದೆ.
“ಮಾಜಿ ಪ್ರಧಾನಿ, ಅವರ ಸಲಹೆಗಾರರು, ಮಾಜಿ ಕ್ಯಾಬಿನೆಟ್ ಮತ್ತು ವಿಸರ್ಜನೆಗೊಂಡ ರಾಷ್ಟ್ರೀಯ ಅಸೆಂಬ್ಲಿಯ ಎಲ್ಲಾ ಸದಸ್ಯರು ಅವರು ಹೊಂದಿದ್ದ ಸ್ಥಾನಗಳ ಆಧಾರದ ಮೇಲೆ ನೀಡಲಾಗಿದ್ದ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹಿಂಪಡೆಯಬೇಕು” ಎಂದು ಸಚಿವಾಲಯ ಪ್ರಕಟಣೆ ತಿಳಿಸಿದೆ.