ವಯನಾಡು ಪ್ರವಾಹ: ಮೃತಪಟ್ಟವರ ಸಂಖ್ಯೆ 275ಕ್ಕೆ ಏರಿಕೆ
ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತ, ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 275ಕ್ಕೆ ಏರಿಕೆಯಾಗಿದ್ದು 230 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಭೂಕುಸಿತದಲ್ಲಿ ನೂರಾರು ಜನರು ಗಾಯಗೊಂಡಿದ್ದು, ಸಾವಿರಾರು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅಕ್ಷರಶಃ ಸ್ಮಶಾನದಂತಾಗಿದ್ದು ಮೃತದೇಹ ಮಾತ್ರವಲ್ಲದೆ ಮನೆ, ಮರಗಳು, ವಾಹನಗಳು ಮಣ್ಣಿನಡಿಗೆ ಬಿದ್ದಿದೆ. ಮಣ್ಣು ಮಿಶ್ರಿತ ನೀರು ಎಲ್ಲೆಲ್ಲೂ ಕಂಡು ಬಂದಿದೆ. ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು ತಮ್ಮವರನ್ನು ಕಳೆದುಕೊಂಡವರ ರೋದನ ಮುಗಿಲು ಮುಟ್ಟಿದೆ.