ಮೊರಾಕ್ಕೋ ಪ್ರಬಲ ಭೂಕಂಪ: 2000 ಗಡಿ ದಾಟಿದ ಮೃತಪಟ್ಟವರ ಸಂಖ್ಯೆ
ಮೊರಾಕ್ಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2000 ಗಡಿ ದಾಟಿದ್ದು 2 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯ ತ್ವರಿತಗತಿಯಿಂದ ನಡೆಯುತ್ತಿದ್ದು ರಕ್ಷಣಾ ಕಾರ್ಯಕ್ಕೆ ನೆರೆಯ ದೇಶವಾದ ಅಲ್ಜೀರಿಯಾ ಸೇರಿದಂತೆ ಹೆಚ್ಚಿನ ದೇಶಗಳು ಸಹಾಯಕ್ಕೆ ಮುಂದಾಗಿವೆ ಎಂದು ಹೇಳಲಾಗಿದೆ.
6.8 ತೀವ್ರತೆಯ ಪ್ರಬಲ ಭೂಕಂಪವು ಮಧ್ಯ ಮೊರಾಕೊದಲ್ಲಿ ಮರ್ರಾಕೇಶ್‌ನ ನೈಋತ್ಯಕ್ಕೆ 72 ಕಿಲೋಮೀಟರ್ ದೂರದಲ್ಲಿ ಸಂಭವಿಸಿದ್ದು, ಇದು ಆರು ದಶಕದಲ್ಲೇ ಸಂಭವಿಸಿದ ಅತೀ ದೊಡ್ಡ ದುರಂತ ಎನ್ನಲಾಗಿದೆ.