ದ.ಕ.ಜಿಲ್ಲಾ ದಾರಿಮೀಸ್ ನಿಂದ ಮೇ.28 ರಂದು ‘ಝಕಾತ್’ ಬಗ್ಗೆ ಅಧ್ಯಯನ ಶಿಬಿರ, ಪ್ರಚಾರಕ್ಕೆ ಚಾಲನೆ
ಪುತ್ತೂರು: ದಾರಿಮೀಸ್ ಅಸೋಸಿಯೇಶನ್ ದ.ಕ.ಜಿಲ್ಲಾ ಸಮಿತಿ ವತಿಯಿಂದ ಕೇರಳದ ಖ್ಯಾತ ವಾಗ್ಮಿ ಶುಹೈಬ್ ಹೈತಮಿ ಅವರಿಂದ ‘ಝಕಾತ್ ‘ ಬಗ್ಗೆ ಅಧ್ಯಯನ ಶಿಬಿರವು ಮೇ 28 ರಂದು ಪಾಣೆಮಂಗಳೂರು ನೆಹರು ನಗರ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದ್ದು, ಅದರ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆದ ಸಭೆಯಲ್ಲಿ ಅಧ್ಯಯನ ಶಿಬಿರದ ಫ್ಲೆಕ್ಸ್ ಬಿಡುಗಡೆಗೊಳಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಕೇರಳದ ಖ್ಯಾತ ವಿದ್ವಾಂಸ ಉಸ್ತಾದ್ ಕೆ.ಟಿ.ಅಬ್ದುಲ್ಲಾ ಫೈಝಿ ವೆಳ್ಳಿಮುಕ್ಕ್, ಜಿಲ್ಲಾ ದಾರಿಮೀಸ್ ಅಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡಂಗಾಯಿ, ಗೌರವಾಧ್ಯಕ್ಷ ಮಾಹಿನ್ ದಾರಿಮಿ ಪಾತೂರು, ಎಂ.ಎಸ್.ಮುಹಮ್ಮದ್, ಕೆ.ಎಂ.ಎ.ಕೊಡುಂಗಾಯಿ, ಕೆ.ಆರ್.ಹುಸೈನ್ ದಾರಿಮಿ, ಅಬ್ದುಲ್ ಹಕೀಂ ಪರ್ತಿಪ್ಪಾಡಿ,ಯಾಕೂಬ್ ದಾರಿಮಿ, ನಾಸಿರ್ ಫೈಝಿ ರೆಂಜಲಾಡಿ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಮಂಗಳ ಅಬೂಬಕ್ಕರ್ ಹಾಜಿ ಬೆಳ್ಳಾರೆ, ಯೂಸುಫ್ ಹಾಜಿ ಕೈಕಾರ, ಇಬ್ರಾಹಿಂ ಮಂಡೆಕೈ, ಅಬ್ಬಾಸ್ ಮದನಿ ಪುತ್ತೂರು,ಇರ್ಶಾದ್ ಫೈಝಿ ಮುಕ್ವೆ, ಜಮಾಲುದ್ದೀನ್ ಹಾಜಿ, ಅಬೂಬಕ್ಕರ್ ಮುಸ್ಲಿಯಾರ್, ಪಿ.ಕೆ.ಮುಹಮ್ಮದ್, ಉಮರ್ ರೆಂಜಲಾಡಿ, ಶಾಫಿ ಇಂಜಿನಿಯರ್ ಪಾಪೆತ್ತಡ್ಕ, ಇಬ್ರಾಹಿಂ ಬಾತಿಷಾ ಹಾಜಿ ಪಾಟ್ರಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಂದಿ ದಾರುಸ್ಸಲಾಂ ಅರಬಿಕ್ ಕಾಲೇಜ್ ನಲ್ಲಿ ದೀರ್ಘ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಉಸ್ತಾದ್ ಕೆ.ಟಿ..ಅಬ್ದುಲ್ಲಾ ಫೈಝಿ ವೆಳ್ಳಿಮುಕ್ಕು ಅವರನ್ನು ದ.ಕ.ಜಿಲ್ಲಾ ದಾರಿಮೀಸ್ ಅಸೋಸಿಯೇಶನ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.