ಆ.5: ಮಂಜ ಮರ್ಕಝ್’ನಲ್ಲಿ:ಬದ್ರ್ ಮಜ್ಲಿಸ್, ಕೂರತ್ ತಂಙಳ್ ಸ್ಮರಣೆ ಕಾರ್ಯಕ್ರಮ
ಪುತ್ತೂರು: ಮಂಜ ಮರ್ಕಝ್ ಅಕಾಡೆಮಿ ಓಫ್ ಥಿಯೋಲಜಿ ಅಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಮಂಜ ದರ್ಗಾ ಶರೀಫ್ ವಠಾರದಲ್ಲಿ ಆ.5ರಂದು ಮಗ್ರಿಬ್ ನಮಾಝ್ ಬಳಿಕ ಮಾಸಿಕ ಮಜ್ಲಿಸುಲ್ ಬದ್ರಿಯ್ಯೀನ್ ಹಾಗೂ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅವರ ಸಂಸ್ಮರಣೆ ಮತ್ತು ವಿಶೇಷ ದುಆ ಕಾರ್ಯಕ್ರಮ ನಡೆಯಲಿದೆ.
ಸಯ್ಯಿದ್ ಶಿಹಾಬುದ್ದೀನ್ ಮದಕ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಹಲವು ಪ್ರಮುಖರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಂಜ ಮರ್ಕಝ್ ಅಕಾಡೆಮಿ ಓಫ್ ಥಿಯೋಲಜಿ ಇದರ ಅಧ್ಯಕ್ಷ ಡಾ ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ ಸಂಸ್ಮರಣೆ ಭಾಷಣ ಮಾಡಲಿದ್ದಾರೆ.