ಗ್ಯಾಸ್ ಗೀಸರ್ ಸೋರಿಕೆ: ಉಸಿರುಗಟ್ಟಿ ಯುವಕ ಸಾವು
ಸ್ನಾನದ ಕೋಣೆಯ ಗ್ಯಾಸ್ ಗೀಸರ್ ನ ರಾಸಾಯನಿಕ ಲೀಕ್ ಆಗಿ ಯುವಕನೋರ್ವ ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಜುಲೈ 28ರಂದು ರಾತ್ರಿ ಮೂಡುಬಿದಿರೆಯ ಕೋಟೆಬಾಗಿಲಿನ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ. ಕೋಟೆಬಾಗಿಲು ನಿವಾಸಿ ಶಾರಿಕ್ (18ವ) ಮೃತ ದುರ್ದೈವಿ.
ಶಾರಿಕ್ ಸ್ನಾನಕ್ಕೆಂದು ತೆರಳಿದಾತ ಬಹಳ ಹೊತ್ತಾದರೂ ಹೊರ ಬಾರದ್ದನ್ನು ಗಮನಿಸಿದ ಆತನ ಸಹೋದರ ಹೋಗಿ ನೋಡಿದಾಗ ಶಾರಿಕ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.