ಕರಾವಳಿರಾಷ್ಟ್ರೀಯ

ಕಬಕ-ಪುತ್ತೂರು ರೈಲು ನಿಲ್ದಾಣಕ್ಕೆ ವಿವಿಧ ಅಗತ್ಯತೆಗಳ ಬೇಡಿಕೆ: ರೈಲ್ವೆ ಸಚಿವರಿಗೆ ಮನವಿ ನೀಡಿದ ಸಂಜೀವ ಮಠಂದೂರು



ಪುತ್ತೂರು: ಕಬಕ-ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಆಗಬೇಕಾದ ಕೆಲವು ಅಗತ್ಯ ಕಾಮಗಾರಿಗಳ ಕುರಿತು  ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಅವರು ರಾಜ್ಯ ರೈಲ್ವೇ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕಬಕ-ಪುತ್ತೂರು ಆದರ್ಶ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂಗೆ ಮಳೆ ಹಾಗೂ ಬಿಸಿಲಿಗೆ ರಕ್ಷಣೆ ನೀಡಲು ಶೆಲ್ಟರ್ ವ್ಯವಸ್ಥೆ, ಸಿ ಸಿ ಕ್ಯಾಮರ ವ್ಯವಸ್ಥೆ,  ಜನರೇಟರ್, ಪ್ರಯಾಣಿಕ ರೈಲು ಕೇವಲ 2 ನಿಮಿಷ ತಂಗುವ ಬದಲು ಕನಿಷ್ಠ 5 ನಿಮಿಷ ತಂಗುವ ವ್ಯವಸ್ಥೆ ಆಗಬೇಕು, ಮಂಗಳೂರು-ಕಬಕ-ಪುತ್ತೂರು ಬೆಳಿಗ್ಗೆ 6.40ಕ್ಕೆ ಬರುವ ಪ್ರಯಾಣಿಕ ರೈಲನ್ನು ಸುಬ್ರಹ್ಮಣ್ಯ ತನಕ ವಿಸ್ತರಣೆ ಮಾಡಬೇಕು, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸಾಮೆತ್ತಡ್ಕ ಹಾಗೂ ಪುತ್ತೂರು ಕ್ಲಬ್ ಇಲ್ಲಿರುವ ರೈಲು ಕ್ರಾಸಿಂಗ್ ಗೆ ಓವರ್ ಬ್ರಿಡ್ಜ್ ಅಥಾವ ಅಂಡರ್ ಬ್ರಿಡ್ಜ್ ಮಾಡಬೇಕು ಎಂಬ ಬೇಡಿಕೆಗಳಿರುವ ಮನವಿಯನ್ನು ಸಚಿವರಿಗೆ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!