ಕ್ರೈಂಜಿಲ್ಲೆ

ಅಂಕೋಲಾ: ನದಿಯಲ್ಲಿ ಕಂಡು ಬಂದ ಟ್ಯಾಂಕರ್, ಗ್ಯಾಸ್ ಸೋರಿಕೆ ಭೀತಿ

ಅಂಕೋಲಾ: ಶಿರೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ ಉಂಟಾದ ಪರಿಣಾಮ ಎರಡು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಗೆ ಉರುಳಿ ಬಿದ್ದಿದ್ದು, ಗ್ಯಾಸ್ ಸೋರಿಕೆ ಸಾಧ್ಯತೆಗಳಿದ್ದು, ಗಂಗಾವಳಿ ನದಿ ಸುತ್ತಮುತ್ತಲಿನ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಶಿರೂರು ಭಾಗದಿಂದ ಗಂಗಾವಳಿ ನದಿಯ ಮೂಲಕ ತೆಲುತ್ತಾ ಟ್ಯಾಂಕರ್‌ ವೊಂದು ಸಗಡಗೇರಿ ಬಳಿ ನಿಂತಿದ್ದು ಆ ಭಾಗದ ಉಳುವರೆ ಸಗಡಗೇರಿ ಶಿರೂರು ಹಾಗೂ ಇನ್ನಿತರ ಪ್ರದೇಶದ ಜನರಿಗೆ ಸ್ಥಳಾಂತರಿಸಲಾಗುತ್ತಿದೆ. ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳ ಪ್ರಯತ್ನ ಮುಂದುವರೆದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!