ಕರಾವಳಿಕ್ರೈಂ

ಬೆಳ್ಳಾರೆ: ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಲಿಂಕ್ ಓಪನ್ ಮಾಡಿ 2.74 ಲಕ್ಷ ರೂ. ಕಳೆದುಕೊಂಡರು!

ಬೆಳ್ಳಾರೆ: ಆನ್ ಲೈನ್ ಮೂಲಕ ಮೋಸ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ದಿಲ್‌ಸಾದ್‌ ಎಸ್‌ (24.ವ) ಎಂಬವರು ಜುಲೈ 9ರಂದು ಸಂಜೆ ಮೊಬೈಲ್‌ ನಲ್ಲಿ Instaram ಉಪಯೋಗಿಸುತ್ತಿರುವಾಗ ಅದರಲ್ಲಿ Work of home without investment ಎಂದು ಲಿಂಕ್‌ ಇರುವ ವೀಡಿಯೋ ಬಂದಿದ್ದು, ಆ ಲಿಂಕ್‌ ನ್ನು ಓಪನ್‌ ಮಾಡಿ, ಅದರಲ್ಲಿನ ಸೂಚನೆಗಳನ್ನು ಪಾಲಿಸಿದಾಗ, Anita Singh ಎಂಬ ಹೆಸರಿನ Telegram ID ಲಿಂಕ್‌ ಕಳುಹಿಸಿ ದಿಲ್‌ಸಾದ್‌ ಎಸ್‌ ಅವರನ್ನು ಸೇರ್ಪಡೆಗೊಳಿಸಿರುತ್ತಾರೆ.

ಸಾಂದರ್ಭಿಕ ಚಿತ್ರ

ಬಳಿಕ ಅಪರಿಚಿತ ಆರೋಪಿಗಳು ವಿವಿಧ ಟಾಸ್ಕ್ ಗಳ ಹೆಸರಿನಲ್ಲಿ ಹಾಗೂ ಇತರೆ ಕಾರಣಗಳನ್ನು ಒಡ್ಡಿ Google Pay ಮುಖಾಂತರ ಹಂತ ಹಂತವಾಗಿ ಒಟ್ಟು ರೂ 274000/- ಹಣವನ್ನು ಪಾವತಿಸಿಕೊಂಡು ವಂಚನೆ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ, ಅಪರಾಧ ಕ್ರಮಾಂಕ : 64/2024, ಕಲಂ 318(4), 319(2) BNS ಮತ್ತು ಕಲಂ: 66(ಡಿ) ಐಟಿ ಆಕ್ಟ್ 2000 ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!