ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ದಿಢೀರ್ ರಾಜೀನಾಮೆ
ಪುತ್ತೂರು: ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ನನಗೆ ಹಲವಾರು ಹುದ್ದೆ ನೀಡಿದ್ದು ಅದನ್ನು ನಾನು ನಿಭಾಯಿಸಿದ್ದೇನೆ. ಇತ್ತೀಚೆಗೆ ಪುಡಾ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಶಾಸಕರು ನೇಮಕ ಮಾಡಿದ್ದರು. ಆದರೆ ಅವರೇ ಮೊನ್ನೆ ಬೆಂಗಳೂರಿನಿಂದ ಪುಡಾ ಡೆಡ್ ಆಗಿದೆ. ನಿಮ್ಮ ಕೆಲಸ ಸಾಕಾಗುವುದಿಲ್ಲ ಎಂದು ಕರೆ ಮಾಡಿ ತಿಳಿಸಿದ್ದಾರೆ. ಇದು ನನ್ನ ಮನಸ್ಸಿಗೆ ತುಂಬಾ ಬೇಸರ ತಂದಿದೆ. ಹಾಗಾಗಿ ಮೂರು ದಿನ ಕಳೆದು ನಾನು ಸರಕಾರಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ.