ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್‌ನ 12ನೇ ಮಳಿಗೆ ಬೆಂಗಳೂರಿನ ಎಚ್.ಬಿ.ಆರ್ ಲೇಔಟ್‌ನಲ್ಲಿ ಶುಭಾರಂಭ
ಬೆಂಗಳೂರು: ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಇದರ 12ನೇ ಶಾಖೆಯನ್ನು ಮತ್ತು ಬೆಂಗಳೂರಿನ ಮೂರನೇ ಶಾಖೆಯನ್ನು ಬೆಂಗಳೂರಿನ ಎಚ್.ಬಿ.ಆರ್ ಲೇಔಟ್‌ನಲ್ಲಿ ಜು.11ರಂದು ಸುಲ್ತಾನ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ರವೂಫ್ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಬ್ದುಲ್ ರಹೀಮ್ ಉಪಸ್ಥಿತಿಯಲ್ಲಿ ಜನಪ್ರಿಯ ಬಾಲಿವುಡ್ ಚಿತ್ರನಟಿ ಪ್ರಾಚಿ ದೇಸಾಯಿ ಉದ್ಘಾಟಿಸಿದರು.
ಬೆಂಗಳೂರಿನ ಈ ವಿಶಾಲ ಮಳಿಗೆಯಲ್ಲಿಯಲ್ಲಿ ಸುಲ್ತಾನ್‌ನ ಬ್ರಾಂಡ್‌ಗಳಾದ ಪ್ಯೂರ್ ವೇರ್ ಡೈಮಂಡ್ ಕಲೆಕ್ಷನ್ ಅಮೋಘ ಪ್ಲಾಟಿನಂ ಕಲೆಕ್ಷನ್ಸ್, ಆಕರ್ಷ್ ಅನ್ ಕಟ್ ಡೈಮಂಡ್, ಅಮೂಲ್ಯ ಜೆಮ್ ಸ್ಟೋನ್ ಕಲೆಕ್ಷನ್ಸ್, ತಾರಕ ಮಕ್ಕಳ ಆಭರಣಗಳು, ಸಿಎಐಎ ಲೈಟ್ ವೈಟ್ ಆಭರಣಗಳು ಮತ್ತು ನಿತ್ಯೋಪಯೋಗಿ ಆಭರಣಗಳು ಹಾಗೆಯೇ ಕ್ಯೂಮಿ ಅಂತರಾಷ್ಟ್ರೀಯ ಮಟ್ಟದ, ಉನ್ನತ ಗುಣಮಟ್ಟದ ಡೈಮಂಡ್ ಆಭರಣಗಳು, ದಿಲ್ಲಾನ್ – ಆಕರ್ಷಕ ಆಂಟಿಕ್ ಕಲೆಕ್ಷನ್, ಸಂಸ್ಕೃತಿ ಪರಂಪರಾಗತ ಆಭರಣಗಳು. ಹೀಗೆ ವೈವಿಧ್ಯಮಯ ಆಭರಣಗಳ ಸಂಗ್ರಹವಿದೆ.
ಬೆಂಗಳೂರಿನ ಈ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ವಿಶೇಷ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಪ್ರತಿದಿನ ಒಬ್ಬ ಗ್ರಾಹಕನಿಗೆ ಒಂದು ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿದ್ದು ಚಿನ್ನಾಭರಣದ ತಯಾರಿಕಾ ವೆಚ್ಚದಲ್ಲಿ 50% ಕಡಿತವಿದೆ. ಪ್ರತಿ ಡೈಮಂಡ್ ಕ್ಯಾರೆಟ್ ಮೇಲೆ ರೂ. 8000/- ರಿಯಾಯಿತಿ ಪಡೆಯಬಹುದಾಗಿದ್ದು ಬೆಳ್ಳಿ ಆಭರಣಗಳ ಮೇಲೆ 25% ಕಡಿತ ಇದೆ. ಹಳೆಯ ಚಿನ್ನದ ಮೇಲೆ ಪ್ರತಿ ಗ್ರಾಂ ಮೇಲೆ ರೂ 50/- ಹೆಚ್ಚುವರಿ ಕೊಡುಗೆ ನೀಡಲಾಗುವುದು. ಈ ಕೊಡುಗೆ ಜುಲೈ 31 ಕೊನೆಯವರೆಗೆ ಇರಲಿದೆ. ಹೆಚ್ಚಿನ ವಿವರಗಳಿಗೆ 080- 40996916 ಸಂಪರ್ಕಿಸಬಹುದು ಎಂದು ಮಳಿಗೆಯ ಪ್ರಕಟನೆಯಲ್ಲಿ ತಿಳಿಸಿದೆ.