ಕಡಬ: ಕೋಳಿ ಅಂಕಕ್ಕೆ ಪೊಲೀಸ್ ದಾಳಿ, 6 ಬೈಕ್, 2 ಕಾರು ಸಹಿತ ಮೂವರು ವಶಕ್ಕೆ
ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ನೇರಂಕಿ ಗ್ರಾಮದ ನೇರಂಕಿ ಎಂಬಲ್ಲಿನ ತೋಟವೊಂದರಲ್ಲಿ, ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ, ಕಡಬ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಅಭಿನಂದನ್ ಜೂ.10ರಂದು ರವರು ಠಾಣಾ ಸಿಬ್ಬಂದಿಗಳೊಂದಿಗೆ ತೆರಳಿ ದಾಳಿ ನಡೆಸಿದ್ದಾರೆ.

ಈ ವೇಳೆ ಕೃತ್ಯದಲ್ಲಿ ತೊಡಗಿದ್ದ 8 ಜನರು ಪರಾರಿಯಾಗಿದ್ದು, ಕಡಬದ ರಾಧಾಕೃಷ್ಣ, ಮೋಹನ್ ದಾಸ್ ಹಾಗೂ ವೆಂಕಟರಮಣ ಎಂಬ 3 ಜನರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ 6 ಬೈಕ್, 2 ಕಾರು, 4 ಕೋಳಿ, ಕೋಳಿ ಅಂಕಕ್ಕೆ ಬಳಸಲಾಗುವ ಕತ್ತಿ ಹಾಗೂ ನಗದು ಹಣ 3,560 ರೂ ವಶಕ್ಕೆ ಪಡೆದುಕೊಂಡಿದ್ದು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.