ಕೂಡುರಸ್ತೆ, ಬಾಲಾಯ ನೀರಿನ ಸಮಸ್ಯೆ: ತಕ್ಷಣ ಸ್ಪಂಧಿಸಿ ನೀರು ಪೂರೈಕೆ ವ್ಯವಸ್ಥೆ ಮಾಡಿ ಪ್ರಶಂಸೆಗೆ ಪಾತ್ರವಾದ ಶಾಸಕ ಅಶೋಕ್ ರೈ
ಪುತ್ತೂರು: ಕಳೆದ ಕೆಲವು ದಿನಗಳಿಂದ ನೀರಿಲ್ಲದೆ ಕೂಡುರಸ್ತೆ, ಬಾಲಾಯ ಪರಿಸರದ ಜನತೆ ಪರದಾಟ ನಡೆಸುತ್ತಿದ್ದು ಜೂ.4ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳೀಯ ಕಾಂಗ್ರೆಸ್ ನಾಯಕರ ಸಹಕಾರದೊಂದಿಗೆ ಪರಿಸರಕ್ಕೆ ನೀರಿನ ಪೂರೈಕೆ ಮಾಡಿದ್ದಾರೆ. ಶಾಸಕ ಅಶೋಕ್ ರೈರವರ ಈ ನಡೆ ಸ್ಥಳೀಯವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಪರಿಸರದಲ್ಲಿ ನೀರಿನ ಸಮಸ್ಯೆಯ ಬಗ್ಗೆ ಕಾಂಗ್ರೆಸ್ಸಿನ ಸ್ಥಳೀಯ ಬೂತ್ ಸಮಿತಿ ಅಧ್ಯಕ್ಷ ಮಜೀದ್ ಬಾಲಾಯ ಅವರು ಶಾಸಕರ ಗಮನಕ್ಕೆ ತಂದಿದ್ದರು. ಪರಿಸರದ ಅತಿ ಅಗತ್ಯವಿರುವ ಮನೆಗಳಿಗೆ ಶಾಸಕ ಅಶೋಕ್ ರೈ ಅವರು ನೀರು ಪೂರೈಕೆ ವ್ಯವಸ್ಥೆ ಮಾಡಿದ್ದು ಪಿಕಪ್ ಮತ್ತು ನೀರಿನ ಬ್ಯಾರಲ್ ಕಳುಹಿಸಿಕೊಟ್ಟಿದ್ದರು. ನಂತರ ಬೂತ್ ಅಧ್ಯಕ್ಷ ಮಜೀದ್ ಬಾಲಾಯರವರ ನೇತೃತ್ವದಲ್ಲಿ ನೀರು ತುಂಬಿಸಿ ಮನೆಗಳಿಗೆ ಸರಬರಾಜು ಮಾಡಲಾಯಿತು.

ಸರ್ವೆ ಕಾಂಗ್ರೆಸ್ ವಲಯ ಅಧ್ಯಕ್ಷ ಎಸ್ ಡಿ ವಸಂತ, ಹಂಝ ಕೂಡುರಸ್ತೆ, ರಜಾಕ್ ಕೂಡುರಸ್ತೆ, ಹನೀಫ್ ಕೂಡುರಸ್ತೆ, ಸಿದ್ದಿಕ್ ಅಜ್ಜಿಕ್ಕಲ್ ಮೊದಲಾದವರು ಸಹಕಾರ ನೀಡಿದ್ದರು.
ಸಕಾಲದಲ್ಲಿ ಸ್ಪಂದಿಸಿ ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಹಾಗೂ ನೀರು ಸರಬರಾಜಿಗೆ ಸಹಕರಿಸಿದ ಸ್ಥಳೀಯ ಕಾಂಗ್ರೆಸ್ ಮುಖಂಡರುಗಳಿಗೆ ಮುಂಡೂರು ಗ್ರಾ.ಪಂ ಸದಸ್ಯ ಮಹಮ್ಮದ್ ಆಲಿ ನೇರೋಳ್ತಡ್ಕ ಕೃತಜ್ಞತೆ ಸಲ್ಲಿಸಿದ್ದಾರೆ.