ಪುರುಷರಕಟ್ಟೆ: ಅಪರಿಚಿತರ ಮಾತನ್ನು ನಂಬಿ 1.3 ಲಕ್ಷ ರೂ ಕಳೆದುಕೊಂಡ ವ್ಯಾಪಾರಿ..!
ಪುತ್ತೂರು: ಆನ್ಲೈನ್ ಮೂಲಕ ಕೃಷಿಗೆ ಬೇಕಾದ ಡ್ರಮ್ ಉತ್ಪನ್ನಗಳನ್ನು ಪೂರೈಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚಿಸಿರುವುದಾಗಿ ವ್ಯಾಪಾರಿಯೋರ್ವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನರಿಮೊಗರು ನಿವಾಸಿ ಗಣೇಶ್ ಪ್ರಭು ದೂರು ನೀಡಿದವರು.
ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿ, ಅಗ್ರೋ ಉತ್ಪನ್ನಗಳನ್ನು ಕೃಷಿಕರಿಗೆ ಮಾರಾಟ ಮಾಡುತ್ತಿದ್ದು, ಯುನಿಟಿ ಪಾಲಿ ಬ್ಯಾರೆಲ್ಸ್ ಪ್ರೈವೇಟ್ ಲಿಮಿಟೆಡ್ ಅಶೋಕ ನಗರ, ಶಿವಾಜಿ ನಗರ, ಪುಣೆ, ಮಹಾರಾಷ್ಟ್ರ ಎಂಬ ಹೆಸರಿನಿಂದ ಗಣೇಶ್ ಪ್ರಭು ಅವರನ್ನು ಅಪರಿಚಿತ ಆರೋಪಿಗಳು ಸಂಪರ್ಕಿಸಿದ್ದರು ಎನ್ನಲಾಗಿದೆ.
ಆನ್ ಲೈನ್ ಮುಖಾಂತರ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ಗಣೇಶ್ ಅವರಿಂದ ಮೇ 8-10ರ ಅವಧಿಯಲ್ಲಿ ಕರೆ ಮಾಡಿ, 9152464514 ಎಂಬ ನಂಬರ್ ಗೆ ರೂ.1,30,500 ಹಣವನ್ನು ಮೂರು ಹಂತಗಳಲ್ಲಿ ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದರು. ಆದರೆ ಹಣ ಪಡೆದುಕೊಂಡವರು ಉತ್ಪನ್ನಗಳನ್ನುಗಳನ್ನು ಕಳುಹಿಸಿಕೊಟ್ಟಿರುವುದಿಲ್ಲ ಎಂದು ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಗಣೇಶ್ ಪ್ರಭು ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.