ಸುಬ್ರಹ್ಮಣ್ಯ-ಪಂಜ -ಮಂಜೇಶ್ವರ ಹೆದ್ದಾರಿ ಜಲಾವೃತ
ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಸುಬ್ರಹ್ಮಣ್ಯದ ಕುಮಾರಧಾರ ನದಿಯ ನೆರೆ ನೀರು ಕುಮಾರಧಾರ ಸಮೀಪದ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಗೆ ನುಗ್ಗಿದ್ದು ಸಂಚಾರ ಕಡಿತಗೊಂಡಿದೆ.
ಕಾರ್ಯ ನಿಮಿತ್ತ ಸುಬ್ರಹ್ಮಣ್ಯ ಭಾಗಕ್ಕೆ ಬಂದಿದ್ದ ಎಂಟು ಮಂದಿಯನ್ನು ಬೋಟ್ ಮೂಲಕ ಎಸ್.ಡಿ.ಆರ್.ಎಫ್. ತಂಡ ಸುರಕ್ಷಿತವಾಗಿ ರಸ್ತೆ ದಾಟಿಸಿದ ಘಟನೆ ಜು.23 ರ ರಾತ್ರಿ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೆಲಸಕ್ಕೆ ಹಾಗೂ ಇತರೆ ಕಾರ್ಯಕ್ಕೆ ಸುಬ್ರಹ್ಮಣ್ಯ ಭಾಗಕ್ಕೆ ಬಂದಿದ್ದ
ಓರ್ವ ಗರ್ಭಿಣಿ
ಮಹಿಳೆ, ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಅವರ ಮನವಿಯ ಮೇರೆಗೆ ಬೋಟ್ ಮೂಲಕ ಅವರ ರಸ್ತೆ ಡಾಟಿ ಅವರವರ ಮನೆಗಳಿಗೆ ತೆರಳಲು ಎಸ್.ಡಿ.ಆರ್.ಎಫ್. ತಂಡ ವ್ಯವಸ್ಥೆ ಕಲ್ಪಿಸಿತು. ಈ ಸಂದರ್ಭದಲ್ಲಿ ಕಡಬ ತಾಲೂಕು ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಿಗರು, ಎಸ್.ಡಿ.ಆರ್.ಎಫ್. ತಂಡದವರು ಉಪಸ್ಥಿತರಿದ್ದರು.
