ಅರಂತೋಡು ತಿರುವಿನಲ್ಲಿ ಲಾರಿ ಪಲ್ಟಿ
ಸುಳ್ಯ: ಅರಂತೋಡು ಸಮೀಪ ಮಾಣಿ ಮೈಸೂರು ಹೆದ್ದಾರಿಯ ತಿರುವಿನಲ್ಲಿ ಲಾರಿ ಪಲ್ಟಿ ಆಗಿದ್ದು ಘಟನೆಯಿಂದ ಲಾರಿಯ ಚಾಲಕನಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೇ.31ರಂದು ರಾತ್ರಿ ಸಂಭವಿಸಿದೆ.
ಮಂಗಳೂರು ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದ ಸರಕು ತುಂಬಿರುವ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಚಾಲಕನಿಗೆ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.