ಹಜ್ ಯಾತ್ರೆ: ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ಅವರಿಗೆ ಬೀಳ್ಕೊಡುಗೆ
ಪುತ್ತೂರು: ಪವಿತ್ರ ಹಜ್ ಯಾತ್ರೆಗೆ ತೆರಳಲಿರುವ ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನ ಆಡಳಿತ ಮಂಡಳಿಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಆಡಳಿತ ಮಂಡಳಿ ಕಾರ್ಯದರ್ಶಿ ಬಶೀರ್ ಹಾಜಿ, ನಿರ್ದೇಶಕರಾದ ಪುತ್ತುಬಾವ ಹಾಜಿ, ಅಬ್ಬಾಸ್ ಹಾಜಿ, ಖಾದರ್ ಹಾಜಿ, ಹಮೀದ್ ಹಾಜಿ, ಅಶ್ರಫ್ ಸವಣೂರು, ಪ್ರಾಂಶುಪಾಲರಾದ ಕೆ.ಪಿ ರಂಸೀ ಮುಹಮ್ಮದ್, ಸದರ್ ಅಬ್ದುಲ್ ರಶೀದ್ ಸಖಾಫಿ ಉಪಸ್ಥಿತರಿದ್ದರು.