ಕ್ರೀಡೆರಾಷ್ಟ್ರೀಯ

ಐಪಿಎಲ್ 2024- ಕೆಕೆಆರ್ ಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು ಗೊತ್ತೇ  

ಐಪಿಎಲ್ 17ನೇ ಸೀಸನ್ ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದುಕೊಂಡಿದೆ.

ಈ ಗೆಲುವಿನೊಂದಿಗೆ, ಕೆಕೆಆರ್ 20 ಕೋಟಿ ರೂ ಬಹುಮಾನವನ್ನು ಪಡೆದುಕೊಂಡರೆ, ಎಸ್‌ಆರ್‌ಹೆಚ್ 12.5 ಕೋಟಿ ರೂ ಪಡೆದುಕೊಂಡಿತು.
ಮೂರನೇ ಸ್ಥಾನ ಗಳಿಸಿದ ರಾಜಸ್ಥಾನ ರಾಯಲ್ಸ್ ಗೆ 7 ಕೋಟಿ ರೂ ಮತ್ತು ನಾಲ್ಕನೇ ಸ್ಥಾನ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6.5 ಕೋಟಿ ರೂ ಪ್ರಶಸ್ತಿ ಮೊತ್ತ ಪಡೆದುಕೊಂಡಿತು.


ಆರೆಂಜ್ ಕ್ಯಾಪ್ ಪ್ರಶಸ್ತಿಯ ವಿರಾಟ್ ಕೊಹ್ಲಿ ಪಾಲಾಗಿದ್ದು ವಿರಾಟ್ ಕೊಹ್ಲಿ 15 ಪಂದ್ಯಗಳಿಂದ 61.75ರ ಸರಾಸರಿಯಲ್ಲಿ 741 ರನ್ ಗಳಿಸಿದ್ದಾರೆ. ಪಂಜಾಬ್ ಬೌಲರ್ ಹರ್ಷಲ್ ಪಟೇಲ್ ಅವರು ಪರ್ಪಲ್ ಕ್ಯಾಪ್ ಪ್ರಶಸ್ತಿ ಪಡೆದರು. ಅವರು 14 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಇಬ್ಬರೂ ತಲಾ 10 ಲಕ್ಷ ರೂ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!