ಹಾಸನ: ಕಾರು ಅಪಘಾತದಲ್ಲಿ 6 ಮಂದಿ ಮೃತಪಟ್ಟ ಪ್ರಕರಣ: ಅನಾಥ ಮಕ್ಕಳಿಗೆ, ಉಚಿತ ವಿದ್ಯಾಭ್ಯಾಸ ನೀಡುವುದಾಗಿ ಶಾಸಕ ಪ್ರದೀಪ್ ಈಶ್ವರ್ ಭರವಸೆ
ಮೇ.26ರಂದು ಬೆಳ್ಳಂಬೆಳಗ್ಗೆ ಹಾಸನದ ಹೊರವಲಯ ಈಚನಹಳ್ಳಿಯಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಗು ಸೇರಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ, ಅಪಘಾತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಅಪಘಾತದಲ್ಲಿ ತಂದೆ ತಾಯಿ ಕಳೆದುಕೊಂಡು ಅನಾಥರಾಗಿರುವ ಇಬ್ಬರು ಬಾಲಕಿಯರು ಎಂದು ಎನ್ನಲಾಗುತ್ತಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಚಿಗಟೇನಹಳ್ಳಿ ಅಜ್ಜಿಯ ಮನೆಯಲ್ಲಿರುವ ಇಬ್ಬರು ಬಾಲಕಿಯರನ್ನು ಭೇಟಿ ಮಾಡಿ ಶಾಸಕ ಪ್ರದೀಪ್ ಈಶ್ವರ್ ಸಾಂತ್ವನ ಹೇಳಿದ್ದಾರೆ.
ಶಾಸಕ ಪ್ರದೀಪ ಈಶ್ವರ ಪಲ್ಲವಿ ಹಾಗೂ ಪೂರ್ಣಿಮಾಳಿಗೆ ಸಾಂತ್ವನ ಹೇಳಿದ್ದು ಅಲ್ಲದೆ, ಇಬ್ಬರ ಹೆಸರಿನಲ್ಲಿ ತಲಾ ಒಂದು ಲಕ್ಷ ಪೋಸ್ಟಲ್ ಡಿಪಾಸಿಟ್ ಮಾಡುವ ಭರವಸೆ ನೀಡಿದ್ದಾರೆ. ಅದರ ಜೊತೆಗೆ ಉಚಿತ ವಿದ್ಯಾಭ್ಯಾಸ ಕೊಡಿಸುವುದಾಗಿ ಪ್ರದೀಪ್ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.