ಮಾಜಿ ಶಾಸಕ ಸಂಜೀವ ಮಠಂದೂರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿಯಿಂದ ದೂರು
ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವ್ಯಕ್ತಿಯ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿ
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ರವರ ನೇತೃತ್ವದಲ್ಲಿ ಪುತ್ತೂರು ನಗರ ಠಾಣೆಗೆ
ದೂರು ನೀಡಲಾಯಿತು. ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಿಯೋಗ ಆಗ್ರಹಿಸಿತು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಪಿ.ಜಿ ಜಗನ್ನಿವಾಸ ರಾವ್, ಬೂಡಿಯಾರ್ ರಾಧಕೃಷ್ಣ ರೈ, ರಾಧಾಕೃಷ್ಣ ಬೋರ್ಕರ್, ಪಿ.ಜಿ. ಜಗನ್ನಿವಾಸ ರಾವ್, ಆರ್. ಸಿ. ನಾರಾಯಣ
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ,ರಾಜೇಶ್ ಬನ್ನೂರು ಪುರುಷೋತ್ತಮ ಮುಂಗ್ಲಿಮನೆ,ಚಂದ್ರಶೇಖರ ಬಪ್ಪಳಿಗೆ,ನಿತೀಶ್ ಕುಮಾರ್ ಶಾಂತಿವನ ಯುವರಾಜ ಪೆರಿಯತ್ತೋಡಿ,ಪ್ರಸನ್ನ ಮಾರ್ತಾ,ಸಹಜ್ ರೈ,ಸುರೇಶ್ ಆಳ್ವ,ರಫೀಕ್ ದರ್ಬೆ,ರಾಧಾಕೃಷ್ಣ ಬೋರ್ಕರ್,ಸುಂದರ್ ಪೂಜಾರಿ ಬಡಾವು,ವಿಜಯ ಪಿ.ಎಸ್.,ಜಯಶ್ರೀ ಶೆಟ್ಟಿ, ಧೀಕ್ಷಾ ಪೈ, ಶಶಿಕಲ ಸಿ. ಎಸ್. ಜ್ಯೋತಿ ನಾಯಕ್, ಚಿತ್ರಾ ರೈ,ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು