ಮಾಜಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಅಶೋಕ್ ರೈ
ಪುತ್ತೂರು: ನನ್ನ ಒಂದು ವರ್ಷದ ನಡೆ ಯಾವ ರೀತಿ ಇದೆ ಎಂದು ತಿಳಿಯಲು ನಾನು ಹಲವರ ಬಳಿ ಹೋಗಿದ್ದೇನೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ವಿಷಯ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ನನ್ನ ಕೆಲಸ ಕಾರ್ಯಗಳನ್ನು ಇನ್ನಷ್ಟು ಉತ್ತಮಪಡಿಸುವ ಸದುದ್ದೇಶದೊಂದಿಗೆ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ, ಇದಕ್ಕೆ ಯಾರ ಪರ್ಮಿಶನ್ ನನಗೆ ಅಗತ್ಯವಿಲ್ಲ,

ಮಾಜಿ ಶಾಸಕರು ಈಗಾಗಲೇ ಚಲಾವಣೆ ಇಲ್ಲದ ನಾಣ್ಯದಂತೆ ಆಗಿದ್ದಾರೆ, ಚಲಾವಣೆಯಲ್ಲಿ ಇರುವಂತೆ ಆಗಬೇಕು ಎನ್ನುವ ಉದ್ದೇಶಕ್ಕೆ ಅವರು ಘರ್ ವಾಪ್ಸಿ ಮತ್ತಿತರ ವಿಚಾರಗಳನ್ನು ಮುಂದಿಟ್ಟುಕೊಂಡು ನನ್ನ ವಿರುದ್ಧ ರಾಜಕೀಯವಾಗಿ ಹೇಳಿಕೆ ನೀಡಿದ್ದಾರೆ, ಅವರಿಗೆ ಬಿಜೆಪಿಯಲ್ಲಿ ಯಾವುದೇ ಅವಕಾಶಗಳು ಸಿಗುವುದಿಲ್ಲ, ಸುಮ್ಮನೆ ಯಾಕೆ ಈ ರೀತಿ ಮಾಡುತ್ತಿದ್ದಾರೆಂದು ಗೊತ್ತಿಲ್ಲ, ಅಭಿವೃದ್ಧಿ ಮಾಡುವವರಿಗೆ ಸಹಕಾರ ಕೊಡುವ ಕೆಲಸ ಅವರು ಮಾಡಲಿ ಎಂದು ಅಶೋಕ್ ರೈ ಹೇಳಿದರು.
ಸೋಶಿಯಲ್ ಮೀಡಿಯಾದಲ್ಲಿ ಯಾರೋ ಏನೋ ಬರೆದಿದ್ದಾರೆಂದು ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ, ನನ್ನ ವಿರುದ್ದವೂ ಬರೆದಿದ್ದಾರೆ ಆಗ ಇವರಿಗೆ ಗೊತ್ತಾಗಿಲ್ವಾ ಎಂದು ಪ್ರಶ್ನಿಸಿದ ಅಶೋಕ್ ರೈಯವರು ನಾನು ಯಾರಿಗೂ ಅನ್ಯಾಯ ಮಾಡಲು ಅವಕಾಶ ಕೊಡುವುದಿಲ್ಲ, ತಪ್ಪು ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ನನ್ನ ಅಭ್ಯಂತರವಿಲ್ಲ ಎಂದು ಹೇಳಿದರು.