ಕುರಿಯ: ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಕುರಿಯ ಗ್ರಾಮದ ಪಡ್ಪು ಎಂಬಲ್ಲಿ ಕಳೆದ ಕೆಲವು ವಾರಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕುಡಿಯಲು ನೀರಿಲ್ಲದೆ ಜನರು ನರಕ ಯಾತನೆ ಅನುಭವಿಸುತ್ತಿದ್ದರು. ಪಡ್ಪು ಕಾಲನಿಯ ಕುಡಿಯುವ ನೀರಿನ ಸಮಸ್ಯೆಯ ಸ್ಥಳೀಯರು ಶಾಸಕರಾದ ಅಶೋಕ್ ರೈ ಗಮನಕ್ಕೆ ತಂದಿದ್ದರು. ತಕ್ಷಣ ಶಾಸಕರು ಕೊಳವೆ ಬಾವಿಯನ್ನು ಮಂಜೂರು ಮಾಡಿದ್ದು ಕೊಳವೆ ಬಾವಿಯನ್ನು ತೆಗೆಯಲಾಗಿದ್ದು ಪಡ್ಪು ನಿವಾಸಿಗಳ ನೀರಿನ ಸಮಸ್ಯೆ ಇತ್ಯರ್ಥಗೊಂಡಿದೆ.