ಮಧುರಾ ಸ್ಕೂಲ್ ನಲ್ಲಿ ಶಿಕ್ಷಕಿಯರಿಗೆ ತರಬೇತಿ ಶಿಬಿರ
ಪುತ್ತೂರು: ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಮೇನಾಲ ಈಶ್ವರಮಂಗಳ ಇಲ್ಲಿ ಶಿಕ್ಷಕಿಯರಿಗೆ 3 ದಿನಗಳ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಸಂಸ್ಥೆಯ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಸಂಸ್ಥೆಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು.
ತರಬೇತುದಾರರಾಗಿ ಆಗಮಿಸಿದ ಅಂಜಲಿ ಮಾಂಟೆಸರಿ ಸುಳ್ಯ ಇದರ ಸಂಚಾಲಕರಾದ ಗೀತಾಂಜಲಿ T G ಮೂರು ದಿನಗಳ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿದರು.
ಶಿಕ್ಷಕಿ ಜಹೀರಾ ಶೈಖ್ ಕಾರ್ಯಕ್ರಮ ನಡೆಸಿಕೊಟ್ಟರು.
ಸಿಬ್ಬಂದಿಗಳಾದ ಇಬ್ರಾಹಿಂ ಮತ್ತು ಸಮದ್ ಸಹಕರಿಸಿದರು. ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೇಜರ್ ರೈಹಾನ ಸ್ವಾಗತಿಸಿದರು. ಶಿಕ್ಷಕಿ ಜುಬೈದ ಪ್ರಾರ್ಥನೆ ನೆರವೇರಿಸಿದರು. ಕಾರ್ಯಗಾರ ಮೇ.13 ರಿಂದ 15ರ ವರೆಗೆ ನಡೆಯಲಿದೆ.