ಸಾಲ್ಮರ : ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ, ಅಸ್ವಾಲಿಹಾ ವುಮೆನ್ಸ್ ಶರೀಅತ್, ಪಿ.ಯು.ಕಾಲೇಜು ಪ್ರವೇಶ ಪತ್ರಿಕೆ ಬಿಡುಗಡೆ
ಪುತ್ತೂರು : ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಪ್ರತಿಷ್ಠಿತ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಆಂಗ್ಲ ಮಾಧ್ಯಮ ಶಾಲೆ ಮತ್ತು ಇದೀಗ ಎಂಟನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಅಸ್ವಾಲಿಹಾ ಮಹಿಳಾ ಶರೀಅತ್ & ಪಿ.ಯು.ಕಾಲೇಜ್ ನಲ್ಲಿ 2024-25 ನೇ ಸಾಲಿನ ದಾಖಲಾತಿಗೆ ಚಾಲನೆ ನೀಡಲಾಯಿತು.
ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಅವರು ಹೊಸದಾಗಿ ದಾಖಲಾತಿ ಪಡೆಯುವ ಎಲ್.ಕೆ.ಜಿ. ಮತ್ತು ಯುಕೆಜಿ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಅಸ್ವಾಲಿಹಾ ಶರೀಅತ್ ಮತ್ತು ಪಿ.ಯು.ವಿಭಾಗಕ್ಕೆ ದಾಖಲಾತಿ ಪಡೆಯುವ ವಿದ್ಯಾರ್ಥಿನಿಯರ ಪೋಷಕರಿಗೆ ಪ್ರವೇಶ ಪತ್ರಿಕೆಯನ್ನು ನೀಡುವ ಮೂಲಕ ಹೊಸ ದಾಖಲಾತಿಗೆ ಚಾಲನೆ ನೀಡಿದರು.
ಶರೀಅತ್ ,ಪಿ.ಯು.ವಿಭಾಗದ ವಿದ್ಯಾರ್ಥಿನಿಯ ಪೋಷಕರಾದ ಹನೀಫ್ ಪಾಟ್ರಕೋಡಿ, ಅಬ್ದುರ್ರಹ್ಮಾನ್ ಕೊಡಿಪ್ಪಾಡಿ ಮತ್ತು ಅಬ್ದುಲ್ ಬಶೀರ್ ಸೇಡಿಯಾಪು ಹಾಗೂ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಪೊಷಕರಾದ ಅಬ್ದುಲ್ ಬಶೀರ್, ಸಂಪ್ಯ, ಅಬ್ದುಲ್ ಜಮಾಲ್ ಸಅದಿ ಸಾಲ್ಮರ ಮತ್ತು ಬಶೀರ್ ದಾರಂದಕುಕ್ಕು ಮೊದಲಾದವರಿಗೆ ಪ್ರವೇಶ ಪತ್ರಿಕೆಯನ್ನು ತಂಙಳ್ ರವರು ನೀಡಿದರು.
ಸಮಾರಂಭದಲ್ಲಿ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್, ಪ್ರಧಾನ ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಪಡೀಲ್, ಸಂಚಾಲಕರಾದ ಮುಹಮ್ಮದ್ ಸಾಬ್ ಹಾಜಿ, ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ, ಕಾರ್ಯಾಲಯ ನಿರ್ವಾಹಕರಾದ ಯೂಸುಫ್ ಕೂಟತ್ತಾನ, ಸಾಲ್ಮರ ದಾರುಲ್ ಹಸನಿಯಾ ಹಿಫ್ಲುಲ್ ಕುರ್ ಆನ್ ಕಾಲೇಜ್ ಸಂಚಾಲಕರಾದ ಅನ್ವರ್ ಮುಸ್ಲಿಯಾರ್, ಅಬ್ದುಲ್ ಗಫೂರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕುಂಬೋಳ್ ತಂಙಳ್ ರವರು ವಿಶೇಷ ಪ್ರಾರ್ಥನೆ ನಡೆಸಿ ವಿದ್ಯಾರ್ಥಿಗಳ ಯಶಸ್ವಿ ಗಾಗಿ ಶುಭ ಹಾರೈಸಿದರು.
ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಅವರು ಸ್ವಾಗತಿಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.