ಒಂದೇ ದಿನ 200ಕ್ಕೂ ಹೆಚ್ಚು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ:
ವರ್ಗಾವಣೆಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇನ್ಸ್ಪೆಕ್ಟರ್ ಗಳು
![](http://newsbites.in/wp-content/uploads/2024/08/PHOTO-2024-08-31-17-33-00-741x1024.jpg)
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಬಹುದೊಡ್ಡ ಬಹುದೊಡ್ಡ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಒಂದೇ ದಿನ 200ಕ್ಕೂ ಹೆಚ್ಚು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
![](http://newsbites.in/wp-content/uploads/2023/08/IMG_20230801_123523.jpg)
ಕರ್ನಾಟಕ ಸರ್ಕಾರ ಒಂದೇ ದಿನ 211 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆ.1ರಂದು ಪ್ರಕಟವಾಗಿರುವ ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ವರ್ಗಾವಣೆ ಆದೇಶವು ತತ್‌ಕ್ಷಣದಿಂದ ಜಾರಿಗೆ ಬಂದಿದೆ.
ವರ್ಗಾವಣೆಗೊಂಡ ದಕ್ಷಿಣಕನ್ನಡ ಜಿಲ್ಲೆಯ ಪೊಲೀಸ್ ಇನ್ಸ್ಪೆಕ್ಟರ್ ಗಳು:
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ಪೂರ್ವ (ಕದ್ರಿ) ಠಾಣೆಯ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ಅವರನ್ನು ಪೊಲೀಸ್ ಪ್ರಧಾನ ಕಚೇರಿಗೆ, ಬಂಟ್ವಾಳದ ವಿವೇಕಾನಂದ ಅವರನ್ನು ರಾಜ್ಯ ಗುಪ್ತ ವಾರ್ತೆಗೆ, ಮಂಗಳೂರು ಸೆನ್ ಠಾಣೆಯ ಸವಿತ್ರ ತೇಜ ಅವರನ್ನು ಬೈಂದೂರು ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.
ಮೂಡುಬಿದಿರೆ ನಿರಂಜನ್ ಕುಮಾರ್‌ರನ್ನು ಬಜ್ಪೆಗೆ, ಸುಳ್ಯದ ನವೀನ್ ಚಂದ್ರ ಜೋಗಿ ಅವರನ್ನು ಉಡುಪಿ ಸೆನ್ ಠಾಣೆಗೆ, ಕೊಣಾಜೆಯ ಪ್ರಕಾಶ್ ದೇವಾಡಿಗ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕದ್ರಾ ಠಾಣೆಗೆ, ಬಂದರ್‌ನ ರಾಘವೇಂದ್ರ ಬೈಂದೂರ್ ಅವರನ್ನು ಕದ್ರಿಗೆ, ಉರ್ವದ ಭಾರತಿ ಅವರನ್ನು ಬಂದರ್‌ಗೆ, ಪಾಂಡೇಶ್ವರದ ಮಂಜುನಾಥ್ ಎಂ. ಅವರನ್ನು ಕೊಡಗಿನ ಶನಿವಾರ ಸಂತೆ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.
![](http://newsbites.in/wp-content/uploads/2024/10/IMG_20241001_093240.jpg)