ಕ್ರೈಂರಾಷ್ಟ್ರೀಯ

ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಮುಸ್ಲಿಂ ಕುಟುಂಬದ ಮೇಲೆ ಬಣ್ಣ ಎರಚಿ ಕಿರುಕುಳ



ಮುಸ್ಲಿಂ ಕುಟುಂಬವೊಂದನ್ನು ಅಡ್ಡಗಟ್ಟಿ ಅವರ ಮೇಲೆ ಬಲವಂತವಾಗಿ ಹೋಳಿ ಬಣ್ಣವನ್ನು ಹಾಕಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಮಾ.20 ರಂದು  ನಡೆದಿದೆ ಎನ್ನಲಾಗಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


ಬೈಕ್‌ ನಲ್ಲಿ ಸಾಗುತ್ತಿದ್ದ ಮುಸ್ಲಿಂ ಕುಟುಂಬವನ್ನು ಕೆಲ ಅಪರಿಚಿತರು ಅಡ್ಡಗಟ್ಟಿ ಬಳಿಕ ಅವರ ಮೇಲೆ ಬಲವಂತವಾಗಿ ಬಣ್ಣದ ನೀರನ್ನು ಎರಚಿದ್ದಾರೆ. ಜೈ ಶ್ರೀರಾಮ್‌ ಘೋಷಣೆಗಳನ್ನು ಕೂಗುತ್ತಾ ಕುಟುಂಬದ ಮೇಲೆ ಬಣ್ಣವನ್ನು ಎಸೆಯಲಾಗಿದೆ.
ಘಟನೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.

Leave a Reply

Your email address will not be published. Required fields are marked *

error: Content is protected !!