ಸಾರೆಪುಣಿ: ಶಂಸುಲ್ ಉಲಮಾ ಯಂಗ್‌ಮೆನ್ಸ್ ವತಿಯಿಂದ ರಂಜಾನ್ ಕಿಟ್ ವಿತರಣೆ, ಇಫ್ತಾರ್ ಕೂಟ
ಪುತ್ತೂರು: ಶಂಸುಲ್ ಉಲಮಾ ಯಂಗ್‌ಮೆನ್ಸ್ ಸಾರೆಪುಣಿ ಇದರ ವತಿಯಿಂದ ಗಟ್ಟಮನೆ ಹಾಗೂ ಸಾರೆಪುಣಿ ಪರಿಸರದ ಅರ್ಹ ಬಡ 11 ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮ ಸಾರೆಪುಣಿ ಮದ್ರಸದ ಗೌರವಾಧ್ಯಕ್ಷರಾದ ಇಸ್ಮಾಯಿಲ್ ಗಟ್ಟಮನೆ ಅಧ್ಯಕ್ಷತೆಯಲ್ಲಿ ಮದ್ರಸದಲ್ಲಿ ಮಾ.19ರಂದು ನಡೆಯಿತು.
ಉಮರ್ ಗಟ್ಟಮನೆ ಕುವೈಟ್ ಹಾಗೂ ಯಂಗ್‌ಮೆನ್ಸ್ ಯುವಕರು, ಊರಿನ ದಾನಿಗಳು ಕಿಟ್ ವಿತರಣೆಗೆ ಸಹಕಾರ ನೀಡಿದರು.
ಸದರ್ ಅಬ್ದುಲ್ ಖಾದರ್ ಉಸ್ತಾದ್ ಅವರು ಯಂಗ್‌ಮೆನ್ಸ್ ಕಾರ್ಯಚಟುವಟಿಕೆ ಬಗ್ಗೆ ವಿವರಿಸಿದರು.ವೇದಿಕೆಯಲ್ಲಿ ದಾರುಲ್ ಉಲೂಮ್ ಮದ್ರಸ ಕಮಿಟಿ ಅಧ್ಯಕ್ಷರಾದ ಅರಬಿ ಕುಂಞಿ ಸಾರೆಪುಣಿ, ಉಪಾಧ್ಯಕ್ಷರಾದ ಇಬ್ರಾಹಿಂ ಕುಯ್ಯಾರ್, ಶಂಸುಲ್ ಉಲಮಾ ಯಂಗ್‌ಮೆನ್ಸ್ ಅಧ್ಯಕ್ಷರಾದ ಅಶ್ರಫ್ ಸಾರೆಪುಣಿ, ದಾರುಲ್ ಉಲೂಮ್ ಮದ್ರಸ ಕಮಿಟಿ ಪ್ರ.ಕಾರ್ಯದರ್ಶಿ ಇಕ್ಬಾಲ್ ಎಚ್.ಎ ಸಾರೆಪುಣಿ, ಮಾಜಿ ಅಧ್ಯಕ್ಷ ಎನ್.ಎಸ್ ಅಬ್ದುಲ್ಲ ಸಾರೆಪುಣಿ, ಯಂಗ್‌ಮೆನ್ಸ್ ಕೋಶಾಧಿಕಾರಿ ಇಬ್ರಾಹಿಂ ಎಸ್ ಉಪಸ್ಥಿತರಿದ್ದರು.
ರಫೀಕ್ ಸಾರೆಪುಣಿ, ಲತೀಫ್ ಸಾರೆಪುಣಿ, ಹಸೈನಾರ್ ಕುಯ್ಯಾರ್, ಲೆಕ್ಕ ಪರಿಶೋದಕ ಇಕ್ಬಾಲ್ ಜಿ, ಆಸಿಫ್ ಸಾರೆಪುಣಿ, ಯಂಗ್‌ಮೆನ್ಸ್ ಉಪಾಧ್ಯಕ್ಷ ಉಸ್ಮಾನ್ ಸಾರೆಪುಣಿ, ಮಾಜಿ ಅಧ್ಯಕ್ಷರಾದ ಝಕೀರ್ ಹುಸೈನ್ ಸಾರೆಪುಣಿ, ತಾಜುದ್ದೀನ್ ಸಾರೆಪುಣಿ, ಶರೀಫ್ ಗಟ್ಟಮನೆ, ಸರ್ಫುದ್ದೀನ್ ಸಾರೆಪುಣಿ, ಮುಝಮ್ಮಿಲ್ ಸಾರಪುಣಿ ಹಾಗೂ ಇನ್ನಿತರ ಯಂಗ್‌ಮೆನ್ಸ್ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಇಫ್ತಾರ್ ಕೂಟ ನಡೆಯಿತು. ನೂರಾರು ಮಂದಿ ಭಾಗವಹಿಸಿದ್ದರು.
ಶಂಸುಲ್ ಉಲಮಾ ಯಂಗ್‌ಮೆನ್ಸ್ ಪ್ರ.ಕಾರ್ಯದರ್ಶಿ ಡಿ.ಎ ಬಶೀರ್ ಗಟ್ಟಮನೆ ಸ್ವಾಗತಿಸಿದರು. ಅಧ್ಯಕ್ಷ ಅಶ್ರಫ್ ಸಾರೆಪುಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.