ಮರ್ಕಝುಲ್ ಹುದಾ ಗಲ್ಫ್ ಸಂಚಾಲಕರಾಗಿ ಶಂಸುದ್ದೀನ್ ಬೈರಿಕಟ್ಟೆ ಆಯ್ಕೆ
ಪುತ್ತೂರು: ಮರ್ಕಝುಲ್ ಹುದಾ ಕರ್ನಾಟಕ ಇದರ ಜಿ.ಸಿ.ಸಿ ಸಮಿತಿಗಳ ನೂತನ ಗಲ್ಫ್ ಸಂಚಾಲಕರಾಗಿ ಶಂಸುದ್ದೀನ್ ಬೈರಿಕಟ್ಟೆಯನ್ನು ಕೇಂದ್ರ ಆಡಳಿತ ಸಮಿತಿ ಆಯ್ಕೆ ಮಾಡಿದೆ.
ಮರ್ಕಝುಲ್ ಹುದಾ ಕರ್ನಾಟಕ ಕೇಂದ್ರ ಸಮಿತಿಯ ಸದಸ್ಯರಾದ ಇವರು ಮಂಗಳೂರಿನ ಮಸ್ನವಿ ಖುರಾನಿಕ್ ಸೆಂಟರ್ ಇದರ ಪ್ರ.ಕಾರ್ಯದರ್ಶೀ ಮತ್ತು ಎಸ್ ಎನ್ ಬಿ ಗ್ರೂಪ್ ಇದರ ಡೈರೆಕ್ಟರ್ ಗಳಲ್ಲಿ ಓರ್ವರಾಗಿದ್ದಾರೆ.
ಎಂಎಚ್ ಕೆ ಸೌದಿ ಅರೇಬಿಯಾ ಇದರ ರಾಷ್ಟ್ರೀಯ ಸಮಿತಿಯ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿರುವ ಇವರು ಅನಿವಾಸಿ ಕನ್ನಡಿಗಾರಾಗಿದ್ದಾರೆ ಎಂದು ಮೀಡಿಯಾ ಮರ್ಕಝ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದೆ.