ಕರಾವಳಿಕ್ರೈಂ

ಕೋಳಿ ಅಂಕದ ಮೇಲೆ ಮುಂದುವರಿದ ಪೊಲೀಸ್ ದಾಳಿಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ಹಲಸಿನ ಕಟ್ಟೆ ಮಾರಿಗುಡಿಯ ಬಳಿ ಕೋಳಿ ಅಂಕ ನಡೆಯುತ್ತಿದ್ದಾಗ, ಉಪನಿರೀಕ್ಷಕರು(ತನಿಖೆ ) ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್ಸೈ ಚಂದ್ರಶೇಖರ ಎ.ಎಂ ಹಾಗೂ ಠಾಣಾ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಆ ವೇಳೆ ಕೋಳಿ ಅಂಕದಲ್ಲಿ ಭಾಗವಹಿಸಿದ್ದವರು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಕಾಲಿಗೆ ಕತ್ತಿಯನ್ನು ಕಟ್ಟಲಾಗಿದ್ದ ಎರಡು ಕೋಳಿಗಳನ್ನು ಮುಂದಿನ ಕಾನೂನುಕ್ರಮಕ್ಕಾಗಿ ವಶಕ್ಕೆ ಪಡೆದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!