ಕರಾವಳಿ

ಸಂಟ್ಯಾರ್ ಅಪಾಯಕಾರಿ ರಸ್ತೆ: ಸ್ಥಳ ವೀಕ್ಷಿಸಿದ ಶಾಸಕ ಅಶೋಕ್ ರೈ ಹೇಳಿದ್ದೇನುಪುತ್ತೂರು: ಸಂಟ್ಯಾರ್ ಅಪಾಯಕಾರಿ ರಸ್ತೆ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ದುರಸ್ಥಿ ಕಾರ್ಯ ಫೆ.3ರಂದು ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.


ಸಂಟ್ಯಾರ್ ನಿಂದ ಪಾಣಾಜೆಗೆ ತೆರಳು ರಸ್ತೆಯ ಬಳಕ್ಕ ಎಂಬಲ್ಲಿರುವ ಸೇತುವೆಯ ಬಳಿ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆ ನಿರ್ಮಾಣದ ವೇಳೆ ಅಪಾಯಕಾರಿ ಹುಬ್ಬುಗಳನ್ನು ತೆರವು ಮಾಡದೆ ಇರುವ ಕಾರಣ ಈ ಭಾಗದಲ್ಲಿ ಸಂಚರಿಸುವ ವಾಹನಗಳು ರಸ್ತೆಯ ಪಕ್ಕಕ್ಕೆ ತೆರಳಿ ಪಲ್ಟಿಯಾಗುತ್ತಿದೆ. ಇದೇ ಸ್ಥಳದಲ್ಲಿ ವಾಹನ ಅಪಘಾತದಿಂದ ಮೂರು ಜೀವಗಳು ಬಲಿಯಾಗಿದೆ. ಮೂರು‌ ದಿನಗಳ ಹಿಂದೆ ರಿಕ್ಷಾವೊಂದು ಪಲ್ಟಿಯಾಗಿ ವ್ಯಕ್ತಿ ಮೃತಪಟ್ಟಿದ್ದು, ಕಳೆದ ವರ್ಷ ನಿಡ್ಪಳ್ಳಿ ಗ್ರಾ.ಪಂ ಸದಸ್ಯರ ಕಾರೊಂದು ಪಲ್ಟಿಯಾಗಿ ಮೃತಪಟ್ಟಿದ್ದರು.


ಅಪಾಯಕಾರಿ ರಸ್ತೆಯನ್ನು ದುರಸ್ಥಿ ಮಾಡಿಸುವಂತೆ ಸಾರ್ವಜನಿಕರು‌ ಶಾಸಕರಾದ ಅಶೋಕ್ ರೈಯವರಲ್ಲಿ ಮನವಿ ಮಾಡಿದ್ದು ಶಾಸಕರ ಮನವಿಗೆ ಇಲಾಖೆ ಸ್ಪಂದಿಸಿದ್ದು ಫೆ.3 ಶನಿವಾರದಂದು ದುರಸ್ಥಿ ಕಾರ್ಯ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!