ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡುವ ಪ್ರಯತ್ನ ನಡೆಸುತ್ತಿದ್ದಾರೆ- ಡಿಕೆಶಿ
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡುವ ಪ್ರಯತ್ನ ನಡೆಸಿದ್ದಾರೆ ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಜನ ಶಾಂತಿ-ಸೌಹಾರ್ದತೆಗಳಿಂದ ಬದುಕುತ್ತಿದ್ದರು ಆದರೆ ಈಗ ಈ ಪ್ರಾಂತ್ಯದಲ್ಲೂ ಅವರು ಕಾನೂನು ಮತ್ತು ಸುವ್ಯವಸ್ಥೆ ಕದಡುವ ಹುನ್ನಾರದಲ್ಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಪ್ರಾಂತ್ಯದ ಎಲ್ಲ ಗ್ರಾಮಗಳ ನಿವಾಸಿಗಳಲ್ಲಿ ಪರಸ್ಪರ ಭ್ರಾತೃತ್ವದ ಭಾವನೆಗಳಿವೆ, ಅವರ ನಡುವಿನ ಸೌಹಾರ್ದತೆಯನ್ನು ಹಾಳುಮಾಡುವ ಹೊಸ ಪ್ರಯೋಗವನ್ನು ಬಿಜೆಪಿ ನಾಯಕರು ಜಾರಿಗೆ ತಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಪಂಚಾಯಿತಿಯು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಮಾತ್ರ ಹಾರಿಸಬೇಕೆಂದು ಹೇಳಿದ್ದರೂ ಹನುಮ ಧ್ವಜ ಹಾರಿಸಿದ್ದಾರೆ. ಬಿಜೆಪಿ ನಾಯಕರೇ ಅಲ್ವಾ, ಘರ್ ಘರ್ ತಿರಂಗಾ ಅಂತ ಘೋಷಣೆ ಸಾರಿದ್ದು, ಎಲ್ಲಿ ಹೋಯಿತು ಅ ಘೋಷಣೆ? ಅವರು ರಾಷ್ಟ್ರಧ್ವಜವನ್ನು ಬಿಟ್ಟು ಹನುಮ ಧ್ವಜವನ್ನೇ ಹಾರಿಸಿಕೊಂಡಿರಲಿ ಎಂದು ಶಿವಕುಮಾರ್ ಹೇಳಿದರು.