ಕರಾವಳಿ

ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠೆಯು
ವಿಶ್ವ ಶಾಂತಿ ನೆಮ್ಮದಿಯನ್ನು ಎಲ್ಲೆಡೆ ಕರುಣಿಸಲಿ: ಶಾಸಕ ಅಶೋಕ್ ರೈಯವರಿಂದ ವಿಶೇಷ ಪ್ರಾರ್ಥನೆಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಕೋಡಿಂಬಾಡಿ ಗ್ರಾಮಸ್ಥರ ಹಾಗೂ ಪುತ್ತೂರಿನ ಸಮಸ್ತ ನಾಗರಿಕರ ಪರವಾಗಿ ತನ್ನ ಸ್ವ ಗ್ರಾಮ ಕೋಡಿಂಬಾಡಿ ಮಠಂತಬೆಟ್ಟು‌ಶ್ರೀ ಮಹಿಷ‌ಮರ್ಧಿನಿ ದೇವಿಗೆ ಪುಷ್ಪವನ್ನು ಸಮರ್ಪಿಸುತ್ತಾ ರಾಜ್ಯ, ದೇಶ ಮತ್ತು ವಿಶ್ವಕ್ಕೆ ಸನ್ಮಂಗಳವನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸಿದರು.

ಈ ದೇಶದಲ್ಲಿ ಎಲ್ಲಾ ಧರ್ಮಿಯರು ಪರಸ್ಪರ ಸಹೋದರತೆಯಿಂದ ಬಾಳ್ವೆ ನಡೆಸುವ ಮೂಲಕ ದೇಶ, ಜಗತ್ತಿನಲ್ಲಿ‌ ಶಾಂತಿ ನೆಲಸುವಂತಾಗಲಿ‌ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ್ ರೈ ರೈ ಮಠಂತಬೆಟ್ಡು, ಮುರಳೀಧರ್ ರೈ ಮಠಂತಬೆಟ್ಟು, ಯೋಗೀಶ್ ಸಾಮಾನಿ, ನಿಹಾಲ್ ಶೆಟ್ಟಿ ಕಲ್ಲಾರೆ ,ದೇವಸ್ಥಾನದ ವ್ಯವಸ್ಥಾಪಕರಾದ ಸಂತೋಷ್ ರೈ ,ವಾರಿಸೇನ ಜೈನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!