ಬಂಟ್ವಾಳ: ಮನೆಗೆ ನುಗ್ಗಿ ತಾಯಿ ಮಗಳನ್ನು ಬೆದರಿಸಿ ಹಣ, ಚಿನ್ನ ದರೋಡೆ
ಬಂಟ್ವಾಳ: ತಾಯಿ ಮತ್ತು ಮಗಳು ಇದ್ದ ಮನೆಗೆ ನುಗ್ಗಿದ ದುಷ್ಕರ್ಮಿಗಳು ನಗ-ನಗದು ದೋಚಿದ ಘಟನೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಬಿ.ಸಿ.ರೋಡು – ಬೆಳ್ತಂಗಡಿ ರಾಜ್ಯಹೆದ್ದಾರಿ ರಸ್ತೆಯ ತಿಮ್ಮಕ್ಕ ಉದ್ಯಾನವನ ಸಮೀಪದ ಮೇನಾಡು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆರಿಟಾ ಸಿಂತಿಯಾ ಪಿಂಟೋ ರವರು ಕಾವಳಪಡೂರು ಗ್ರಾಮದ ಬಿ.ಸಿ.ರೋಡು – ಬೆಳ್ತಂಗಡಿ ರಾಜ್ಯ ಹೆದ್ದಾರಿ ರಸ್ತೆಯ ತಿಮ್ಮಕ್ಕ ಉದ್ಯಾನವನ ಸಮೀಪದ ಮೇನಾಡು ಎಂಬಲ್ಲಿ ತನ್ನ ತಾಯಿಯ ಜೊತೆ ವಾಸ್ತವ್ಯವಿದ್ದು, ಜ.11 ರಂದು ಮುಂಜಾನೆ 4 ಜನ ಅಪರಿಚಿತರು ಬಂದು ಮನೆಯ ಕಾಲ್ ಬೆಲ್ ಒತ್ತಿದ್ದು, ಈ ವೇಳೆ ಬಾಗಿಲು ತೆಗೆದಾಗ ಚಾಕು ತೋರಿಸಿ ಬೆದರಿಸಿದ ಆರೋಪಿಗಳು, ಮನೆಯ ಒಳಗೆ ಜಾಲಾಡಿ, ಕಪಾಟಿನಲ್ಲಿದ್ದ ಅಂದಾಜು ರೂ 3,20,000/-ಮೌಲ್ಯದ ಒಟ್ಟು 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು, ರೂ 11,000/- ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ಸುಲಿಗೆ ಮಾಡಿರುವುದಲ್ಲದೆ, ಬೆದರಿಕೆ ಒಡ್ಡಿ ರೂ 30,000/- ನಗದು ಹಣವನ್ನು ಪಡೆದು ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 03/2024 ಕಲಂ 394 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ರಿಷ್ಯಂತ್ ಸಿ. ಬಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.