ಕರಾವಳಿ

ಅನಾರೋಗ್ಯ ಪೀಡಿತ ಮಹಿಳೆಗೆ ಆಕ್ಸಿಜನ್ ಯಂತ್ರ ನೀಡಿದ ಶಾಸಕರು


ಪುತ್ತೂರು: ಶ್ವಾಸ ಕೋಶದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಳಿಕೆ ಗ್ರಾಮದ ಮಿತ್ತಳಿಕೆ ನಿವಾಸಿ ಕುಮಾರಿ ಪುಲಕಿತ ಎಂಬವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಆಕ್ಸಿಜನ್ ಯಂತ್ರವನ್ನು ನೀಡಿದರು.


ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು , ಆರ್ಥಿಕವಾಗಿ ತೀರ ಬಡತನದಲ್ಲಿರುವ ಇವರಿಗೆ ಆಕ್ಸಿಜನ್ ಯಂತ್ರ ಖರೀದಿಸಲು ಹಣಕಾಸಿನ ಅಡಚಣೆಯಾಗಿತ್ತು. ತನ್ನ ಸಂಕಷ್ಟವನ್ನು ಕಳೆದ ಮೂರು ದಿನಗಳ ಹಿಂದೆ ಶಾಸಕರ ಬಳಿ ಹೇಳಿಕೊಂಡಿದ್ದರು. ಆಕ್ಸಿಜನ್ ಯಂತ್ರ ಕೊಡಿಸುವ ಭರವಸೆ ನೀಡಿದ್ದ ಶಾಸಕರು ಮೂರು ದಿನದೊಳಗೆ ಅದನ್ನು ಸಂತ್ರಸ್ಥ ಮಹಿಳೆಗೆ ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಅಳಿಕೆ ಗ್ರಾಪಂ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ನನ್ನ ಬಳಿ ಸಹಾಯ ಕೇಳಿ ಈ ಬಡ ಕುಟುಂಬ ಕಚೇರಿಗೆ ಕಳೆದ ಮೂರದಿನಗಳ ಹಿಂದೆ ಬಂದಿದ್ರು. ತಕ್ಷಣವೇ ಮಹಿಳೆಯ ಉಸಿರಾಟಕ್ಕೆ ಅಗತ್ಯವಾಗಿ ಬೇಕಾದ ಆಕ್ಸಿಜನ್ ಯಂತ್ರವನ್ನು ಕೊಡಿಸಿದ್ದೇನೆ. ಅವರು ಆರೋಗ್ಯವಂತರಾಗಿರಲಿ ಎಂಬುದೇ ನನ್ನ ಆಶಯವಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!