ನ.6: ಪುತ್ತೂರಿನಲ್ಲಿ ಕುಂಟು ದ ಶಾಪ್ ವೆಡ್ಡಿಂಗ್ ಲಾಫ್ಟ್ ಶುಭಾರಂಭ
ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಕುಂಟು ದ ಶಾಪ್‌ನ ಸಹ ಸಂಸ್ಥೆ ವೆಡ್ಡಿಂಗ್ ಲಾಫ್ಟ್ ನ.6ರಂದು ಪುತ್ತೂರು ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಶಾಸಕ ಅಶೋಕ್ ಕುಮಾರ್ ರೈ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ನಗರ ಸಭೆಯ ಮುಖ್ಯಾಧಿಕಾರಿ ಮಧು ಮನೋಹರ್, ಕೊಂಬೆಟ್ಟು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಬೆಂಗಳೂರು ಫಾರ್ಮಾ ಲಿಮಿಟೆಡ್ ಇದರ ವೈಸ್ ಚೇರ್‌ಮೆನ್ ಉಮ್ಮರ್ ಬೀಜದಕಟ್ಟೆ, ಕೆನರಾ ಬ್ಯಾಂಕ್ ಚೀಫ್ ಮೆನೇಜರ್ ವನಜಾ ಪ್ರಸಾದ್ ಎಚ್, ನಗರ ಸಭಾ ಸದಸ್ಯರಾದ ಯೂಸುಫ್ ಡ್ರೀಮ್ಸ್, ಹಾಗೂ ಬಾಲಚಂದ್ರ, ಡಯಾ ಕೇರ್ ಸ್ಪೆಶಾಲಿಟಿ ಕ್ಲಿನಿಕ್‌ನ ವೈದ್ಯೆ ಡಾ.ಹಬೀನ, ಹಿಂದುಸ್ಥಾನ್ ಬಿಲ್ಡರ್‌ನ ಎಂ.ಡಿ ಇಬ್ರಾಹಿಂ ಪಾವೂರು, ಪುತ್ತೂರು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಸುರಯ್ಯ, ಕೂರ್ನಡ್ಕ ಫೀರ್ ಮೊಹಲ್ಲಾ ಜುಮಾ ಮಸೀದಿ ಅಧ್ಯಕ್ಷ ಕೆ.ಎಚ್ ಖಾಸಿಂ, ಇಸ್ಮಾಯಿಲ್ ಎಂ ಕೆನರಾ ಮೊದಲಾದವರು ಭಾಗವಹಿಸಲಿದ್ದಾರೆ.
ಬಂಪರ್ ಬಹುಮಾನ:ಶುಭಾರಂಭದ ಪ್ರಯುಕ್ತ ರೂ.2000 ಮೊತ್ತಕ್ಕಿಂತ ಹೆಚ್ಚಿನ ಡ್ರೆಸ್ ಖರೀದಿ ಮಾಡುವವರಿಗೆ ಮಳಿಗೆಯಲ್ಲಿ ಕೂಪನ್ ದೊರೆಯಲಿದ್ದು ಬಂಪರ್ ಬಹುಮಾನವಾಗಿ ರೆಫ್ರಿಜರೇಟರ್, ವಾಶಿಂಗ್ ಮೆಷಿನ್, ಮಿಕ್ಸರ್ ಗ್ರೈಂಡರ್ ನೀಡಲಾಗುತ್ತದೆ. ಅಲ್ಲದೇ 25 ಇತರ ಬಹುಮಾನಗಳನ್ನು ಕೂಡಾ ನೀಡಲಾಗುತ್ತದೆ. 2024 ಎಪ್ರಿಲ್ 30ರಂದು ಇದರ ಡ್ರಾ ನಡೆಸಲಾಗುವುದು ಎಂದು ಕುಂಟು ದ ಶಾಪ್‌ನ ಮಾಲಕರು ತಿಳಿಸಿದ್ದಾರೆ.