ಕಡಬ: ಚಿಲ್ಲರೆ ನೀಡದ ಕಾರಣಕ್ಕೆ ವೃದ್ದರೋರ್ವರನ್ನು ಅರ್ಧ ದಾರಿಯಲ್ಲಿ ಬಸ್ಸಿನಿಂದ ಇಳಿಸಿದ ಕಂಡಕ್ಟರ್..!
ಕಡಬ: ಚಿಲ್ಲರೆ ಹಣ ನೀಡಿಲ್ಲವೆಂಬ ಕಾರಣಕ್ಕೆ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ ವೃದ್ಧರೋರ್ವರನ್ನು ಅರ್ಧ ದಾರಿಯಲ್ಲೇ ಇಳಿಸಿ ಹೋದ ಅಮಾನವೀಯ ಘಟನೆ ಜ.6ರಂದು ಕಡಬದಲ್ಲಿ ನಡೆದಿದೆ. ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿದ ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಕಾಂಚನ ಎಂಬಲ್ಲಿ ಇಳಿಯುವುದಾಗಿ ಹೇಳಿ ಕಂಡಕ್ಟರ್ ಗೆ 200 ರೂ. ನೀಡಿದ್ದರು. ಈ ವೇಳೆ ಕಂಡಕ್ಟರ್ ಚಿಲ್ಲರೆ ಕೇಳಿದ್ದು, ವೃದ್ಧ ಚಿಲ್ಲರೆ ಇಲ್ಲ ಎಂದಾಗ ಕೋಪಗೊಂಡು ಅರ್ಧ ದಾರಿಯಲ್ಲೇ ಇಳಿಸಿ ಹೋಗಿದ್ದಾರೆ ಎನ್ನಲಾಗಿದೆ.
ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿದ ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಕಾಂಚನ ಎಂಬಲ್ಲಿ ಇಳಿಯುವುದಾಗಿ ಹೇಳಿ ಕಂಡಕ್ಟರ್ ಗೆ 200 ರೂ. ನೀಡಿದ್ದರು. ಈ ವೇಳೆ ಕಂಡಕ್ಟರ್ ಚಿಲ್ಲರೆ ಕೇಳಿದ್ದು, ವೃದ್ಧ ಚಿಲ್ಲರೆ ಇಲ್ಲ ಎಂದಾಗ ಕೋಪಗೊಂಡು ಅರ್ಧ ದಾರಿಯಲ್ಲೇ ಇಳಿಸಿ ಹೋಗಿದ್ದಾರೆ ಎನ್ನಲಾಗಿದೆ.
ಕಾಂಚನದಲ್ಲಿ ಇಳಿಯುವ ವೇಳೆ ಚಿಲ್ಲರೆ ನೀಡಿದರೆ ಸಾಕೆಂದು ವೃದ್ಧರು ಮನವಿ ಮಾಡಿಕೊಂಡರಾದರೂ ಕಂಡಕ್ಟರ್ ಗೋಳಿಯಡ್ಕ ಎಂಬಲ್ಲಿ ಇಳಿಸಿ ಹೋಗಿರುವುದಾಗಿ ತಿಳಿದು ಬಂದಿದೆ.
ಕಂಡಕ್ಟರ್ ನ ಈ ಅಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.