ಅವರಿಗೆ ಅವರೇ ಸಾಟಿ..!!
‘ಶರಣರ ಬದುಕನ್ನು ಮರಣದಲ್ಲಿ ಕಾಣು’
✍️ಶತ್ರುಂಜಯ ಆರಿಗ ಜೈನ್, ಬೆಳಂದೂರು
ತಡರಾತ್ರಿಯ ಫೋನ್ ಕಾಲ್ ಮರಣದ ಸುದ್ದಿ ಹೊತ್ತು ಬರುವುದು ಗ್ಯಾರಂಟಿ ಎಂಬ ಸ್ಪಷ್ಟತೆಯೊಂದಿಗೇ ನಿನ್ನೆ ರಾತ್ರಿ ಫೋನ್ ಕಾಲ್ ರಿಸಿವ್ ಮಾಡಿದೆ. ಆ ಕಡೆ ಮಾತಾಡಿದ ಮಿತ್ರರೊಬ್ಬರು ‘ಅರ್ತಿಕೆರೆ ಹಾಜಿ ಹೋಗಿ ಬಿಟ್ಟರು’ ಅಂದು ನನ್ನ doubt clear ಮಾಡಿಬಿಟ್ಟರು.
ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ ಊರ ಮಂದಿಗೆ, ಮುಸ್ಲಿಂ ಸಮುದಾಯಕ್ಕೆ , ಸ್ಥಳೀಯ ಕಾಂಗ್ರೆಸ್ ಪಕ್ಷಕ್ಕೆ ಅಘೋಷಿತ ನಾಯಕ. ಪದವಿಯ ಸ್ಥಾನಮಾನದ ಹಂಗು ಬೇಡದ ಸ್ವಾಭಿಮಾನಿ.
ಆಜಾನುಭಾಹು ಆರಡಿಗೂ ಮೀರಿದ ಧೃಡಕಾಯ
ಸಾದಾ half sleeves ಶುಭ್ರ ಬಿಳಿ cotton ಶರ್ಟು , ಬಿಳಿಮುಂಡು , ಹೆಗಲ ಮೇಲೆ white ಶಾಲು ಹಾಕಿ ಎಂಬತ್ತರ ಮೇಲೆ ಮತ್ತಷ್ಟು ಹರೆಯದ ಈ ಮನುಷ್ಯ straight ಆಗಿ ನಡೆಯುತ್ತಾ ಹೊರಟರೆಂದರೆ ಎಲ್ಲೋ ನ್ಯಾಯ ಪಂಚಾಯಿತಿ successful ಆಗಿ ಮುಗೀತು ಅಂತಾನೇ ಅರ್ಥ. ನೇರಾ ನೇರಾ ನಿಲುವು, ನೇರ ನುಡಿ. ಈಗಿನ ತರಹದ performing politics ಗೊತ್ತೇ ಇಲ್ಲ . ಖಾಸಗಿ ಬದುಕು ಬೇರೆ, ರಾಜಕೀಯ ಸಾಮಾಜಿಕ ಬದುಕು ಬೇರೆ ಅಂತ ಇವರಿಗೆ ಅನಿಸಿದ್ದೇ ಇಲ್ಲ . ಮಾಡುತ್ತೇನೆ ಅಂದ ಕಾರ್ಯ ಸ್ವಂತ ಜಾಗ ಮಾರಿಯಾದರೂ ಮಾಡಿಯೇ ಸಿದ್ದ. ಆಗದ ಕೆಲಸ ಆಗಿದ್ದಲ್ಲಿ ಸಾಧ್ಯವಿಲ್ಲ ಅಂತ ಒಮ್ಮೆ ಅಂದರೆ ತಿಳಿಯೋದಿಲ್ಲ್ವೇ ನಿಮಗೆ ಅಂತ ಗದರಿಯಾರು .
ಎದುರಿನ ಮನುಷ್ಯ commissioner ಆಗಲಿ ಜಿಲ್ಲಾಧಿಕಾರಿಯೇ ಇರಲಿ SP ಯೇ ಇರಲಿ ಇವರ approach ಒಂದೇ ತರ. ದೇಹ ಬಾಗಿಸೋದು ಸ್ವರ ತಗ್ಗಿಸೋದು ಪ್ರಶ್ನೆಯೇ ಇಲ್ಲ, ಆತ ಯಾರದರೆ ನನಗೇನು ನಾನು ಅಬ್ದುಲ್ ರಹಿಮಾನೇ ಅನ್ನುವ ಸ್ವಭಾವಥಹಾ self respect ಇವರದ್ದು.
ಎಂಬತ್ತರ ಮೇಲಿನ ಹರೆಯದ ಈ ಮನುಷ್ಯ ಹರೆಯದ ಅಂತರ ಮೀರಿ ನನ್ನ ಆತ್ಮೀಯ ಬಂಧು, ರಾಜಕೀಯ, ಸಾಮಾಜಿಕ, ಸಾಮುದಾಯಿಕ ಕೆಲಸಗಳಲ್ಲಿ ತುಂಬಾ ಕ್ಷಣಗಳು ಒಟ್ಟಿಗೆ ಕಳೆದಿದ್ದಿದೆ. ಇವರ ಮಾತಿಗೆ ಕಿವಿಯಾದದ್ದಿದೆ. ನಮ್ಮ ಮಾತು ಕೃತಿಗಳಿಗೆ ಇವರು ಸಾಕ್ಷಿಯಾದ, ಮೆಚ್ಚಿ ಕೊಂಡ, ಒಟ್ಟಾಗಿ ಚಹಾಗೋಷ್ಠಿ, ಊಟ, ತಿರುಗಾಟದ ಹಲವು ನೆನಪುಗಳಿವೆ.
ಮರಣ ಹೊಂದೋದಿಕ್ಕೆ ಎರಡೇ ದಿನ ಮೊದಲು ಭೇಟಿಯಾಗಿದ್ದೆ. ತಮ್ಮ ಎರಡೂ ಹಸ್ತಗಳಲ್ಲಿ ನನ್ನ ಕೈ ಹುದುಗಿಸಿ ಗಟ್ಟಿಯಾಗಿ ಹಿಡಿದುಕೊಂಡು ಮಾತು ಮುಗಿಸೋವರೆಗೂ ಹಿಡಿತ ಬಿಡಲೇ ಇಲ್ಲ. ಆರೋಗ್ಯದ ಬಗ್ಗೆ ವಿಚಾರಿಸಿದೆ. ಇನ್ನೇನಿದೆ ನಮ್ಮದು , ಆರೋಗ್ಯ ಸರಿಯಿದ್ದರೂ ಇಲ್ಲದಿದ್ದರೂ ಸಾಯೋದಿಕ್ಕೆ ದೇವರು ಏನಾರು ಕಾರಣ ಹುಡುಕಿ ಇಟ್ಟಿರೋನು, ಕರೆದಾಗ ಹೋಗೋದೇ ಅಂದವರು ನೀವೆಲ್ಲಾ ಜೋಪಾನ ಆರೋಗ್ಯ ಕಾಪಾಡಿಕೋಬೇಕು ಅಂತಂದು ಕೈ ಬೀಸಿ ಹೊರಟು ಬಿಟ್ಟರು.
ನಿನ್ನೆ ಅತ್ಯಂತ ನೆಮ್ಮದಿಯ ದಿನ ಮುಗಿಸಿ ಕತ್ತಲಾಗುತ್ತಾ ಸಣ್ಣಗೆ uneasy feel. Hospital ತಡರಾತ್ರಿ ambulance ಅಲ್ಲಿ dead body ವಾಪಾಸ್. ಶುಕ್ರವಾರದ ಶುಭದಿನ ಹಾಜಾರ್ರ ದೇಹ ಮರಳಿ ಮಣ್ಣಿಗೆ .
“ಶರಣರ ಬದುಕನ್ನು ಮರಣದಲ್ಲಿ ಕಾಣು” ಅನ್ನುವ ಮಾತಿನಂತೆ ಜನಜಾತ್ರೆ. ✍️ಶತ್ರುಂಜಯ ಆರಿಗ ಜೈನ್, ಬೆಳಂದೂರು